ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಹೈದರಾಬಾದ್‌ ವ್ಯಕ್ತಿಯ ಮೇಲೆ ಗುಂಡಿನ ದಾಳಿ!

ವಾಷಿಂಗ್ಟನ್​: ಅಮೆರಿಕದ ಚಿಕಾಗೋದಲ್ಲಿ ಹೈದಾರಾಬಾದ್​ ಮೂಲದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ದುಷ್ಕರ್ಮಿಗಳು ಸೋಮವಾರ ಮುಂಜಾನೆ ಮೊಹಮ್ಮದ್​ ಮುಜೀಬುದ್ದೀನ್ (43)​ ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಜೀಬುದ್ದೀನ್​ ಪತ್ನಿ, ಮಕ್ಕಳು ಮತ್ತು ತಾಯಿ ಹೈದರಾಬಾದ್​ನಲ್ಲೇ ನೆಲೆಸದ್ದಾರೆ. ಪತಿಯ ಮೇಲೆ ನಡೆದ ದಾಳಿಯ ಕುರಿತು ಮುಜೀಬುದ್ದೀನ್​ ಪತ್ನಿ ತೆಲಂಗಾಣದ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್​ ಅವರಿಗೆ ಪತ್ರ ಬರೆದಿದ್ದಾರೆ.

ಮುಜೀಬುದ್ದೀನ್​ ರೂಮ್​ಮೇಟ್​ ಒಬ್ಬರು ಕುಟುಂಬಸ್ಥರಿಗೆ ಕರೆ ಮಾಡಿ ಘಟನೆ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಇದೀಗ ಮುಜೀಬುದ್ದೀನ್ ನೋಡಿಕೊಳ್ಳಲು ಯಾರು ಇಲ್ಲದಿರುವುದರಿಂದ ಕುಟುಂಬ ತುಂಬಾ ಆತಂಕಕ್ಕೆ ಒಳಗಾಗಿದೆ. ಹೀಗಾಗಿ ಅಗತ್ಯ ನೆರವು ಒದಗಿಸಿ ಕೊಡುವಂತೆ ಮುಜೀಬುದ್ದೀನ್​ ಪತ್ನಿ ಪತ್ರದ ಮೂಲಕ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

22/12/2020 11:44 am

Cinque Terre

93.65 K

Cinque Terre

1