ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿವೈಎಸ್‍ಪಿ ಲಕ್ಷ್ಮಿ ಆತ್ಮಹತ್ಯೆ ಕೇಸ್: ಪುತ್ರಿಯ ಸ್ನೇಹಿತನ ಮೇಲೆ ತಂದೆ ಅನುಮಾನ

ಬೆಂಗಳೂರು: ಸಿಐಡಿ ವಿಭಾಗದ ಡಿವೈಎಸ್‌ಪಿ ಲಕ್ಷ್ಮಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ತಂದೆ ವೆಂಕಟೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ಪುತ್ರಿಯ ಸ್ನೇಹಿತನ, ಗುತ್ತಿಗೆದಾರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಎರಡು ದಿನದ ಹಿಂದೆ ಅಳಿಯ ಹೈದರಾಬಾದ್‌ಗೆ ಹೋಗಿದ್ದರು. ಇತ್ತ ಪಾರ್ಟಿ ಮಾಡಿರುವ ವ್ಯಕ್ತಿ ಮನೋಹರ್ ಯಾರು ಅಂತ ನನಗೆ ಗೊತ್ತಿಲ್ಲ. ನನ್ನ ಮಗಳಿಗೆ ಮನೆ, ಹಣ, ಅಧಿಕಾರ ಹೀಗೆ ಎಲ್ಲವೂ ಇದೆ. ಆದರೂ ಖಿನ್ನತೆ ಯಾಕೆ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಗೆಳತಿಯ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಲೋಕೇಶ್, ''ಲಕ್ಷ್ಮಿ ಅವರಿಗೆ ಕೌಟುಂಬಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇರಲಿಲ್ಲ. ಗಂಡ- ಹೆಂಡತಿ ಚೆನ್ನಾಗಿಯೇ ಇದ್ದರು. ಆದರೆ ಮಕ್ಕಳಾಗಿಲ್ಲ ಎಂಬ ಕೊರಗು ಅವರಲ್ಲಿತ್ತು. ಹೀಗಾಗಿ ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರಬಹುದು'' ಎಂದು ಹೇಳಿದ್ದರು.

Edited By : Vijay Kumar
PublicNext

PublicNext

17/12/2020 12:36 pm

Cinque Terre

65 K

Cinque Terre

1

ಸಂಬಂಧಿತ ಸುದ್ದಿ