ನಾಗ್ಪುರ: ಮೊಮ್ಮಗಳೊಂದಿಗಿನ ಸ್ನೇಹ ಪ್ರಶ್ನೆ ಮಾಡಿದ್ದಕ್ಕೆ ಕಿರಾತಕನೊಬ್ಬ ತನ್ನ ಗೆಳತಿಯ ಅಜ್ಜಿಯನ್ನೇ ಕೊಲೆ ಮಾಡಿದ್ದಾನೆ.
ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಯುವಕ ಸಾಮಾಜಿಕ ಜಾಲತಾಣದ ಮೂಲಕ 20 ವರ್ಷದ ಯುವತಿಗೆ ಪರಿಚಯವಾಗಿದ್ದ. ಈ ಪರಿಚಯ ನಂತರ ಲವ್ ಆಗಿದೆ. ಆಗಾಗ ಆ ಯುವಕ ಈ ಯುವತಿಯ ಮನೆಗೆ ಬಂದು ಹೋಗುತ್ತಿದ್ದನಂತೆ. ಇತ್ತೀಚೆಗೆ ಯುವತಿಯ ಮನೆಯವರು ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ.
ಅಲ್ಲಿಯೂ ಬಂದು ಈ ಯುವಕ ತನ್ನ ಪ್ರೇಯಸಿಯನ್ನು ಭೇಟಿಯಾಗುತ್ತಿದ್ದ ಎನ್ನಲಾಗಿದೆ. ಯುವತಿಯ ಅಜ್ಜಿ ಇದನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ಕುಪಿತಗೊಂಡ ಯುವಕ ಆಕೆಯನ್ನು ಕೊಲೆ ಮಾಡಿದ್ದಾನೆ. ಜೊತೆಗೆ ಘಟನೆ ನೋಡಿದ ಯುವತಿಯ ತಮನನ್ನೂ ಕೊಲೆ ಮಾಡಿದ್ದಾನೆ. ಕೆಲ ಹೊತ್ತಿನ ನಂತರ ಚಲಿಸುತ್ತಿರುವ ರೈಲಿನ ಎದುರು ನಿಂತು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
PublicNext
11/12/2020 05:43 pm