ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಡ್ಡಿ ಬೇರ್ ನಲ್ಲಿ ಡ್ರಗ್ ಮಾರಾಟ: ಆರೋಪಿ ಬಂಧನ

ಬೆಂಗಳೂರು: ಮಕ್ಕಳಾಡುವ ಆಟಿಕೆ ಟೆಡ್ಡಿ ಬೇರ್​ನಲ್ಲಿ ಮಾದಕ ವಸ್ತುವನ್ನು ಇಟ್ಟು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಡ್ರಗ್‌ ಪೆಡ್ಲರ್​ನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಶಾಕೀರ್ ಹುಸೇನ್(34) ಬಂಧಿತ ಡ್ರಗ್‌ ಪೆಡ್ಲರ್. ಈತನಿಂದ 28 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2200 ಎಂಡಿಎಂಎ ಟ್ಯಾಬ್ಲೆಟ್ಸ್, 71 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಒಂದು ಎಂಡಿಎಂಎ ಮಾತ್ರೆ 3-4 ಸಾವಿರಕ್ಕೆ ಮಾರಾಟ ಮಾಡುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವು ಸಿಗದಂತೆ ಡ್ರಗ್ಸ್ ಅನ್ನು ರೈಲಿನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಈತ ಬೆಂಗಳೂರಿನ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕಳೆದ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈತ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ನಂತರ ದುಶ್ಚಟಗಳಿಗೆ ದಾಸನಾದ ಈತ ಬಾಂಗ್ಲಾದ ಗಡಿಭಾಗದಿಂದ ಮಾದಕ ವಸ್ತು ಖರೀದಿಸಿ ಅಸ್ಸಾಂ ರಾಜ್ಯದಿಂದ ರಸ್ತೆ ಮಾರ್ಗವಾಗಿ ಕಾರಿನಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಸಂಚರಿಸಿಕೊಂಡು ಬಂದು ನಗರದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ .

Edited By : Nagaraj Tulugeri
PublicNext

PublicNext

07/12/2020 07:25 pm

Cinque Terre

66.57 K

Cinque Terre

1

ಸಂಬಂಧಿತ ಸುದ್ದಿ