ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇಶ್ಯೆ ಎಂದು ಗೆಳೆಯನಿಂದ ಅವಮಾನ: ಬೆಂಕಿ ಹಚ್ಚಿಕೊಂಡ ಯುವತಿ- ಸೆಲ್ಫಿ ವಿಡಿಯೋದಿಂದ ಹೊರಬಿತ್ತು ಸತ್ಯ

ರಾಯ್‌ಪುರ: ಗೆಳೆಯನ ಅವಮಾನಕ್ಕೆ ಮನನೊಂದ ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಛತ್ತೀಸಗಡದ ರಾಯಗಢನಲ್ಲಿ ನಡೆದಿದೆ.

ಪುಷ್ಪಾ ಬೆಹ್ರಾ ಆತ್ಮಹತ್ಯಗೆ ಯತ್ನಿಸಿರುವ ಯುವತಿಯಾಗಿದ್ದು, ಆಕೆಯ ದೇಹದ ಶೇ.70 ರಷ್ಟು ಭಾಗ ಬೆಂಕಿಗೆ ಆಹುತಿಯಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾಳೆ. ತಾನು ಆತ್ಮಹತ್ಯೆಗೆ ಯತ್ನಿಸಲು ಪ್ರಿಯಕರ ಮೋಹನ್ ಪಟೇಲ್ ಕಾರಣ ಎಂದು ಆರೋಪಿಸಿದ್ದಾಳೆ.

ಆರಂಭದಲ್ಲಿ ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ಪುಷ್ಪಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಆಕೆ ಆತ್ಮಹತ್ಯೆಗೆ ಮುನ್ನ ಪುಷ್ಪಾ ಮಾಡಿದ್ದ ಸೆಲ್ಫಿ ವಿಡಿಯೋ ಮಾಡಿ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಆರೋಪಿ ಮೋಹನ್ ಹೆಸರು ಬಹಿರಂಗವಾಗಿದೆ.

ನಾನು ಮೋಹನ್‌ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ಆತ ನನ್ನೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡನು. ಕೊನೆಗೆ ನನ್ನ ವೇಶ್ಯಾವಾಟಿಕೆ ಮಹಿಳೆ ಎಂದು ಹೇಳಿ ಅವಮಾನಿಸಿದನು. ಹತ್ತಾರು ಗೂಂಡಾಗಳು ಮನೆಯನ್ನ ಧ್ವಂಸಗೊಳಿಸಿದರು. ನಿಂದನೆ ಬಳಿಕ ಮೋಹನ್ ನನ್ನ ಮೇಲೆ ಹಲ್ಲೆ ನಡೆಸಿ ಹೋದನು ಎಂದು ಪುಷ್ಪಾ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾಳೆ.

Edited By : Vijay Kumar
PublicNext

PublicNext

03/12/2020 07:22 pm

Cinque Terre

72.91 K

Cinque Terre

7

ಸಂಬಂಧಿತ ಸುದ್ದಿ