ಬೆಂಗಳೂರು- ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಡಿಜೆ ಹಳ್ಳಿ ಗಲಭೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗಿದೆ. ಅದರ ಬೆನ್ನಲ್ಲೇ ಇನ್ನೋರ್ವ ಆರೋಪಿ ಮಾಜಿ ಕಾರ್ಪೋರೇಟರ್ ಜಾಕೀರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಜಾಕೀರ್, ಮಾಜಿ ಮೇಯರ್ ಸಂಪತ್ ರಾಜ್ ಆಪ್ತನಾಗಿದ್ದಾನೆ. ಗಲಭೆ ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪ ಈತನ ಮೇಲಿದೆ. ಇದಕ್ಕೂ ಮುನ್ನ ನೀಡಲಾಗಿದ್ದ ನೋಟಿಸ್ ಗೆ ಸ್ಪಂದಿಸಿ ವಿಚಾರಣೆ ಎದುರಿಸಿದ್ದ ಜಾಕೀರ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
PublicNext
03/12/2020 09:36 am