ಚಂಡೀಗಢ: ರಾಜಕೀಯ ಮುಖಂಡರೊಬ್ಬರ ಡಾಬಾದಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ಪಂಜಾಬ್ ಪೊಲೀಸರು ಬೇಧಿಸಿದ್ದು, ಮೂವರನ್ನು ಬಂಧಿಸಿದ್ದಾರೆ.
ಪಂಜಾಬ್‌ನ ಗುರುದಾಸ್‍ಪುರ ಜಿಲ್ಲೆಯ ಟೀನಾನಗರದಲ್ಲಿ ಡಾಬಾ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಇದು ಪಂಜಾಬ್‌ನ ಶಿವಸೇನೆಯ ಉಪಾಧ್ಯಕ್ಷರ ಡಾಬಾದ ಮಾಲೀಕ ಎಂದು ವರದಿಯಾಗಿದೆ.
ಡಾಬಾದಲ್ಲಿ ಕಳೆದ ಒಂದೂವರೆ ವರ್ಷದಿಂದ ಮಾಂಸದಂಧೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿಸಿದಾಗ ಸೆಕ್ಸ್ ದಂಧೆ ಬಯಲಿಗೆ ಬಂದಿದೆ. ತಕ್ಷಣವೇ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ಆದರೆ ಡಾಬಾಗೆ ಯುವತಿಯರನ್ನು ಕಳುಹಿಸುತ್ತಿದ್ದ ಮಹಿಳೆ ತಪ್ಪಿಸಿಕೊಂಡಿದ್ದಾಳೆ. ಇತ್ತ ಹೋಟೆಲ್ ಮಾಲೀಕನಿಗೆ ಪೊಲೀಸ್ ಭದ್ರತೆ ನೀಡಿದ್ದರಿಂದ ವಿಷಯ ತಿಳಿದಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ವರದಿಯಾಗಿದೆ.
PublicNext
28/11/2020 07:54 pm