ಬೆಂಗಳೂರು- ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿದೆ. ತನಿಖೆಯಿಂದ ಐಎಂಎ ಕಂಪನಿ ಮಾಡಿದ ಕರ್ಮಕಾಂಡಗಳು ಒಂದೊಂದಾಗಿ ಹೊರಬರುತ್ತಿವೆ. ರಾಜ್ಯದಲ್ಲಿನ ಐಪಿಎಸ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮಾಡಿದ ತಪ್ಪಿನಿಂದಲೇ ಈ ಕಂಪನಿ ಜನರಿಗೆ ಮೋಸ ಮಾಡಲು ಸಾಧ್ಯವಾಯಿತು ಎನ್ನಲಾಗಿದೆ.
ಮೋಸ ಹೋದವರು ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಅಲ್ಲಿ ಸಮಜಾಯಿಷಿ ಸಿಗುತ್ತಿತ್ತು. ಹೊರತಾಗಿ ಎಫ್ಐಆರ್ ದಾಖಲಾಗುತ್ತಿರಲಿಲ್ಲ. ದೂರುದಾರರು ಠಾಣೆ ಮೆಟ್ಟಿಲೇರುತ್ತಿದ್ದಂತೆ ವಿಷಯ ಮನ್ಸೂರ್ ಖಾನ್ ಗೆ ತಿಳಿಯುತ್ತಿತ್ತು. ದೂರು ಸ್ವೀಕಾರವಾಗದಂತೆ ಮನ್ಸೂರ್ ಖಾನ್ "ವ್ಯವಸ್ಥೆ" ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮವೊಂದಕ್ಕೆ ಮಾಹಿತಿ ಇತ್ತು. ಖಾಸಗಿ ಸುದ್ದಿ ವಾಹಿನಿಯ CEO ಒಬ್ಬರು ಸುದ್ದಿ ಪ್ರಸಾರಕ್ಕೆ ಮುಂದಾಗಿದ್ದರು. ಇದು ಗೊತ್ತಾಗುತ್ತಿದ್ದಂತೆ ಮನ್ಸೂರ್ ಖಾನ್ ಸುದ್ದಿ ವಾಹಿನಿಯ CEO ಗೆ 3 ಕೋಟಿ ಹಣ ನೀಡಿದ್ದ ಎನ್ನಲಾಗಿದೆ.
PublicNext
27/11/2020 07:38 am