ಹಾಸನ: ಜಿಲ್ಲೆಯ ವಿಶ್ವವಿಖ್ಯಾತ ದೊಡ್ಡಗದವನಹಳ್ಳಿ ಶ್ರೀಲಕ್ಷ್ಮಿ ದೇವಾಲಯದ ವಿಗ್ರಹವನ್ನೇ ಒಡೆದು ಹಾಕಲಾಗಿದೆ. ನಿಧಿ ಆಸೆಗಾಗಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಹಾಸನ ತಾಲೂಕಿನಲ್ಲಿರುವ ಸುಮಾರು 906 ವರ್ಷಗಳ ಇತಿಹಾಸ ಹೊಂದಿರುವ ದೊಡ್ಡಗದ್ದವನಳ್ಳಿ ಲಕ್ಷ್ಮಿ ದೇವಾಲಯದ ವಿಗ್ರಹವನ್ನು ಕಳ್ಳರು ಒಡೆದು ಹಾಕಿದ್ದಾರೆ. ಬೆಳಿಗ್ಗೆ ಅರ್ಚಕರು ದೇವಸ್ಥಾನದ ಬಾಗಿಲು ತೆಗೆದು ನೋಡಿದಾಗ ಒಡೆದುಹೋದ ಸ್ಥಿತಿಯಲ್ಲಿರುವ ಮಹಾಕಾಳಿ ವಿಗ್ರಹ ಕಾಣಿಸಿದೆ.
ಕಳ್ಳರು ನಿಧಿಗಾಗಿ ವಿಗ್ರಹ ಒಡೆದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದು ಹೊಯ್ಸಳ ವಾಸ್ತುಶೈಲಿಯ ಅಪೂರ್ವ ಚತುಷ್ಕೂಟಾಚಲ ಶೈಲಿಯಲ್ಲಿರುವ ದೇವಾಲಯವಾಗಿದೆ. ಇಂತಹ ಅಪರೂಪದ ದೇವಾಲಯಕ್ಕೆ ನುಗ್ಗಿ ವಿಗ್ರಹವನ್ನು ಧ್ವಂಸಗೊಳಿಸಿರುವುದಕ್ಕೆ ಸಚಿವ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
PublicNext
20/11/2020 06:33 pm