ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವಕ ಮೇಲೆ ರಾಸಾಯನಿಕ ಎರಚಿದ್ದ ಕಿರಾತಕ ಪೊಲೀಸರ ವಶಕ್ಕೆ

ಕಾರವಾರ: ನಗರದ ಗ್ರೀನ್ ಸ್ಟ್ರೀಟ್‌ನಲ್ಲಿ ಯುವಕನೊಬ್ಬನ ಮೇಲೆ ರಾಸಾಯನಿಕ ಎರಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತಾಲೂಕಿನ ಹೊಸಾಳಿಯ ಹರೀಶ ರೇವಣಕರ(30) ಬಂಧಿತ ಆರೋಪಿ. ಹಳೆಯ ದ್ವೇಷಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಬಂದ ನಾಲ್ಕು ಜನರ ತಂಡವು ನಗರದ ಗ್ರೀನ್ ಸ್ಟ್ರೀಟ್ ಬಳಿ ತಾಲೂಕಿನ ಹೊಸಾಳಿ ಮೂಲದ ನಿತೇಶ ಕೃಷ್ಣಾನಂದ ನಾಯ್ಕ (28) ಈತನ ಮೇಲೆ ರಾಸಾಯನಿಕವನ್ನು ಎರಚಿ ತೀವೃವಾಗಿ ಗಾಯಗೊಳಿಸಿ ಪರಾರಿಯಾಗಿದ್ದರು.

ಯುವಕನ ಸಂಬಂಧಿಕರು ಈ ವೇಳೆ ಪೊಲೀಸರಿಗೆ ದೂರು ನೀಡಿ ಹರೀಶ ಹಾಗೂ ಆತನ ಸಂಗಡಿಗರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಿದ್ದರು. ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು ಹರೀಶ ರೇವಣಕರ ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ನ್ಯಾಯಾಧೀಶರೆದುರು ಹಾಜರು ಪಡಿಸಿದ್ದು ಈ ವೇಳೆ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Vijay Kumar
PublicNext

PublicNext

17/11/2020 06:14 pm

Cinque Terre

42.27 K

Cinque Terre

0

ಸಂಬಂಧಿತ ಸುದ್ದಿ