ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೋಲೆ ಚಿತ್ರದ ಡೈಲಾಗ್ ಹೇಳಿದ ಪೊಲೀಸ್ ಅಧಿಕಾರಿಗೆ ನೋಟಿಸ್

ಭೋಪಾಲ್: ಶೋಲೆಯ ಗಬ್ಬರ್ ಸಿಂಗ್ ಡೈಲಾಗ್ ಹೇಳಿ ಪೊಲೀಸ್ ಅಧಿಕಾರಿಯೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ನಡೆದಿದೆ.

ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಕೆ.ಎಲ್ ದಾಂಗಿ ಅವರು ಬಾಲಿವುಡ್ ಚಿತ್ರವಾದ ಶೋಲೆಯ ಗಬ್ಬರ್‍ಸಿಂಗ್ ಪಾತ್ರದ ಡೈಲಾಗ್ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇವಲ 15 ಸೆಕೆಂಡ್‍ಗ ಇರುವ ಈ ಒಂದೇ ಒಂದು ವಿಡಿಯೋ ಪೊಲೀಸ್ ಅಧಿಕಾರಿಗೆ ಸಂಕಷ್ಟ ತಂದಿದೆ.

ಪೊಲೀಸ್ ಅಧಿಕಾರಿಯ ಈ ವೈರಲ್ ವಿಡಿಯೋ ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ದಾಂಗಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದರ ಬಗ್ಗೆ ಪ್ರಾಥಮಿಕ ತನಿಖೆ ನಂತರ ಮುಂದಿನ ಕ್ರಮವನ್ನು ಕೈ ಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಸಿಂಗ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

16/11/2020 09:51 pm

Cinque Terre

120.37 K

Cinque Terre

2