ಮಧುರೈ: ಮೂವರು ದುಷ್ಕರ್ಮಿಗಳ ತಂಡ ಹಾಡುಹಗಲಲ್ಲೇ ಯುವಕನೋರ್ವನ ಕತ್ತು ಕಡಿದು ಚರ್ಚ್ ಬಾಗಿಲಲ್ಲಿ ಇಟ್ಟು ಪರಾರಿಯಾಗಿದ್ದಾರೆ.
ಮಧುರೈ ನಗರದ ಸೇಂಟ್ ಮೇರೀಸ್ ಚರ್ಚ್ ಬಳಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಯುವಕನನ್ನು 22 ವರ್ಷದ ಮುರುಘನಾಥಂ ಎಂದು ಗುರುತಿಸಲಾಗಿದೆ.
ತನ್ನ ಸ್ನೇಹಿತ ಮುನಿಸ್ವಾಮಿ ಜೊತೆ ಮುರುಘನಾಥಂ ನಡೆದುಕೊಂಡು ಬರುತ್ತಿದ್ದಾಗ ಕಾರಿನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳು ಮುರುಘನಾಥಂ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತಕ್ಷಣ ಅಲ್ಲಿಂದ ಕಾಲ್ಕಿತ್ತ ಮುನಿಸ್ವಾಮಿ ಜೀವ ಉಳಿಸಿಕೊಂಡಿದ್ದಾನೆ.
ನಂತರ ಪೊಲೀಸರಿಗೆ ಮುನಿಸ್ವಾಮಿ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಯುವಕನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮುರುಘನಾಥಂ ಮೃತಪಟ್ಟ ನಂತರ ದುಷ್ಕರ್ಮಿಗಳು ಆತನ ತಲೆಯನ್ನು ಕಡಿದು ಹಾಕಿದ್ದಾರೆ. ಇದನ್ನು ಸ್ಥಳೀಯರೋರ್ವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
16/11/2020 06:41 pm