ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ ಕಡೆ ತಂಗಿ ಮದುವೆ ಕ್ಯಾನ್ಸಲ್, ಲವ್ ಕೂಡ ಫೇಲ್: ಆತ್ಮಹತ್ಯೆಗೆ ಶರಣಾದ ಯುವಕ

ಮೈಸೂರು: ಆ ಕಡೆ ತಂಗಿಯ ಮದುವೆ ರದ್ದಾಗಿದೆ ಹಾಗೂ ಇತ್ತ ತನ್ನ ಪ್ರೇಮ ಕೂಡ ಕೈಕೊಟ್ಟಿದೆ ಇದರಿಂದ ತೀವ್ರವಾಗಿ ಮನನೊಂದ ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿಜಯಶ್ರೀಪುರದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಚೇತನ್ ಶರ್ಮ(29) ಎಂದು ಗುರುತಿಸಲಾಗಿದೆ. ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್, ಮೂಲತಃ ಬೆಂಗಳೂರು ನಿವಾಸಿ. ಈತ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದನು. ಈತ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇದೀಗ ಲವ್ ಫೇಲ್ ಆಗಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಇತ್ತೀಚೆಗಷ್ಟೇ ಫಿಕ್ಸ್ ಆಗಿದ್ದ ಆತನ ತಂಗಿ ಮದುವೆ ಕೂಡ ರದ್ದಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಚೇತನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಕುರಿತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

14/11/2020 02:27 pm

Cinque Terre

84.13 K

Cinque Terre

2

ಸಂಬಂಧಿತ ಸುದ್ದಿ