ಮೈಸೂರು: ಇತ್ತೀಚೆಗೆ ನವಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಸಾವನ್ನಪ್ಪಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು ಅದರ ಕಾರಣ ಬಿಚ್ಚಿಟ್ಟಿದ್ದಾರೆ.
ಪೊಲೀಸರ ಮುಂದೆ ಪ್ರತ್ಯಕ್ಷದರ್ಶಿಗಳು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಘಟನೆಗೆ ಹೈ ಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಡ್ರೆಸ್ ಧರಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಜೋಡಿ ಫೋಟೋಶೂಟ್ ವೇಳೆ ಏಕಾಏಕಿ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪ ಮಗುಚಲು ಹೀಲ್ಡ್ ಚಪ್ಪಲಿ, ಭಾರದ ಡ್ರೆಸ್ ಕೂಡ ಕಾರಣ ಎಂದು ಅವರು ಪೊಲೀಸರ ಮುಂದೆ ವಿವರಿಸಿದ್ದಾರೆ.
ಮೈಸೂರಿನಿಂದ ಫೋಟೋಶೂಟ್‍ಗಾಗಿ ಮುಡುಕುತೊರೆಗೆ ಆಗಮಿಸಿದ್ದ ಜೋಡಿ, ಅಲ್ಲಿನ ನದಿ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ನಿರ್ಧಾರ ಮಾಡಿದ್ದರು. ಹೀಗಾಗಿ ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ತೆಪ್ಪ ಹತ್ತಿದ ಶಶಿಕಲಾ, ಕೆಲಕಾಲ ನಿಂತುಕೊಂಡೇ ಇದ್ದರು. ನಂತರ ಕುಳಿತುಕೊಳ್ಳಲು ಹೋದಾಗ ಹೀಲ್ಡ್ ಚಪ್ಪಲಿ ಸ್ಲಿಪ್ ಆಗಿದೆ ಈ ಕಾರಣದಿಂದ ತೆಪ್ಪ ಏಕಾಏಕಿ ಮಗುಚಿದೆ. ಪರಿಣಾಮ ಈಜು ಬಾರದ ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಹೇಳಿದ್ದಾರೆ.
PublicNext
11/11/2020 01:43 pm