ಬೆಂಗಳೂರು- ಬಿಡಿಎ ಭೂಸ್ವಾಧೀನಾಧಿಕಾರಿ ಸುಧಾ ಅವರು ಸದ್ಯ ಎಸಿಬಿ ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕಿಡ್ನಾಪ್ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಸುಧಾ ಮೇಲೆ ಎಫ್ ಐ ಆರ್ ದಾಖಲಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಕೆ ಎಸ್ ಎಸ್ ಅಧಿಕಾರಿ ಡಾ.ಸುಧಾ ಅವರ ಪತಿ ಸ್ಟೋಯಿನಿ ಜೋಸೆಫ್ ಪ್ರಮುಖ ಆರೋಪಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಲಾಗಿತ್ತು.
ಸಾಲ ಕೊಟ್ಟ ವಿಚಾರವಾಗಿ ಕಿಡ್ನಾಪ್?
ಸ್ಟೋಯಿನಿ ಜೋಸೆಫ್ ಅವರ ಸ್ನೇಹಿತ ಅಜಿತ್ ಶೆಟ್ಟಿ ಎಂಬುವರ ಬಳಿ ಪ್ರವೀಣ್ ಗಡಿಯಾರ್ ಎಂಬ ಉದ್ಯಮಿ 30 ಲಕ್ಷ ಸಾಲ ಪಡೆದುಕೊಂಡಿದ್ದರಂತೆ. ಒಂದು ವರ್ಷದ ಬಳಿಕ ಪ್ರವೀಣ್ ಗಡಿಯಾರ್ ಒಟ್ಟು 43 ಲಕ್ಷ ಹಣವನ್ನ ವಾಪಸ್ ಕೊಟ್ಟಿದ್ದರಂತೆ. ಇನ್ನೂ ಹಣ ಕೊಡಬೇಕು ಎಂದು ಪೀಡಿಸಿ ಅವರು ಒಪ್ಪದಿದ್ದಾಗ ಸ್ಟೊಯಿನಿ ಜೋಸೆಫ್ ಹಾಗೂ ಅಜಿತ್ ಶೆಟ್ಟಿ ಕೂಡಿಕೊಂಡು ಪ್ರವೀಣ್ ಗಡಿಯಾರ್ ಅವರನ್ನ ಕಿಡ್ನಾಪ್ ಮಾಡಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪ ಇದೆ. ಈ ಎಲ್ಲ ಕೃತ್ಯಕ್ಕೆ ಕೆ ಎ ಎಸ್ ಅಧಿಕಾರಿ ಸುಧಾ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿ ಪ್ರಭಾವ ಹೇರಿದ್ದರು ಎನ್ನಲಾಗಿದೆ.
PublicNext
07/11/2020 03:38 pm