ದಾವಣಗೆರೆ: ವೈಯಕ್ತಿಕ ದ್ವೇಷದ ಹಿನ್ನಲೆ ಅಡಿಕೆ ಹಾಗೂ ಪಪ್ಪಾಯ ಮರಗಳ ಮಾರಣಹೋಮ ಮಾಡಿರುವಂತಹ ಘಟನೆ ತಾಲ್ಲೂಕಿನ ಬೋರಗೊಂಡನಹಳ್ಳಿ ಗ್ರಾಮದ ಬಳಿ ನಡೆದಿದೆ.
ತಿಪ್ಪೇಸ್ವಾಮಿ ಎನ್ನುವ ರೈತರಿಗೆ ಸೇರಿದ ಎರಡು ವರ್ಷದ 1500 ಅಡಿಕೆ ಗಿಡ ಹಾಗೂ ಫಲಕ್ಕೆ ಬಂದ ಪಪ್ಪಾಯ ಗಿಡಗಳನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಬೆಳಗ್ಗೆ ಎದ್ದು ರೈತ ತೋಟಕ್ಕೆ ಹೋದಾಗ ಈ ದುಷೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
17/12/2021 01:06 pm