ಬೆಂಗಳೂರು: ಟಾಲಿವುಡ್ ಗಾಯಕಿ ಹರಿಣಿ ಅವರ ತಂದೆ ಅಯಾಲಸೋಮೆ ಅಜುಲ ಕಾಳಿಪ್ರಸಾದ್ ರಾವ್ ಅವರ ಮೃತ ದೇಹ ಯಲಹಂಕ-ರಾಜಾನುಕುಂಟೆ ರೈಲ್ವೆ ಟ್ರಾಕ್ ನಡುವೆ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಬೆಂಗಳೂರು ಗ್ರಾಮಾಂತರ ಪೊಲೀಸರು ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮೃತ ವ್ಯಕ್ತಿ ಹೈದರಾಬಾದ್ ನಲ್ಲಿ ಪ್ರಾಜೆಕ್ಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಪ್ರಯಾಣಿಕ ರೈಲಿನ ಲೋಕೊ ಪೈಲಟ್ ಒಬ್ಬರು ಮೃತದೇಹ ಗಮನಿಸಿ ಯಲಹಂಕ ಸ್ಟೇಷನ್ ಮಾಸ್ಟರ್ ಗಮನಕ್ಕೆ ತಂದಿದ್ದಾರೆ. ದೂರಿನ ಅನ್ವಯ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಹಣೆ, ಕೈ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿತ್ತು. ಘಟನಾ ಸ್ಥಳದಲ್ಲಿ ಪೊಲೀಸರು ಬ್ಲೇಡ್, ಕತ್ತರಿ, ಚಾಕುಗಳನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆ ವರದಿಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ.
PublicNext
25/11/2021 10:11 pm