ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕೋರಮಂಗಲದ ಮಂಗಳಾ ಕಲ್ಯಾಣ ಮಂಟಪದ ಬಳಿ ನಡೆದ ಭೀಕರ ಕಾರು ಅಪಘಾತಕ್ಕೆ ನೀರಿನ ಬಾಟಲ್ ಸಹ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬಂದಿದೆ.
ಹೌದು. ಪ್ರಕರಣದ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಾರಿನಲ್ಲಿ ನೀರಿನ ಬಾಟಲ್ ಸಿಕ್ಕಿದೆ. ಆದರೆ ಇದು ದೊರಕಿದ್ದು ಕಾಲಿನ ಭಾಗದಲ್ಲಿರುವ ಬ್ರೇಕ್ ಲಿವರ್ ಕೆಳಗಡೆ. ಇದರಿಂದಾಗಿ ಓವರ್ ಸ್ಪೀಡ್‌ನಲ್ಲಿದ್ದ ಕಾರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ನೀರಿನ ಬಾಟಲ್ ಮೊದಲೇ ಕೆಳಗೆ ಬಿದ್ದಿತ್ತಾ ಅಥವಾ ಅಪಘಾತದ ರಭಸಕ್ಕೆ ಬಿದ್ದಿದ್ಯಾ ಎನ್ನುವುದು ಗೊತ್ತಿಲ್ಲ. ಆದರೆ ಬ್ರೇಕ್ ಅಡಿಯಲ್ಲೇ ಬಾಟಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮೊದಲೇ ಬಿದ್ದಿರಬಹುದು ಎನ್ನುವುದು ಪೊಲೀಸರ ಅನುಮಾನ.
PublicNext
01/09/2021 06:11 pm