ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ಖಾತೆ ಬಳಸಿ ಪಾಕ್ ಜೊತೆ ಸಂಪರ್ಕ : ಆರ್ಮಿ ಡ್ರೈವರ್ ಅರೆಸ್ಟ್

ಜೈಪುರ: ಬದ್ಧ ವೈರಿ ಪಾಕಿಸ್ತಾನಕ್ಕೆ ದೇಶದ ಸೇನೆಯ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಆರ್ಮಿ ಕಚೇರಿಯ ಚಾಲಕನನ್ನು ರಾಜಸ್ಥಾನದ ಗುಪ್ತಚರ ತಂಡ ಅರೆಸ್ಟ್ ಮಾಡಿದೆ.

29 ವರ್ಷದ ರಾಮ್ ನಿವಾಸ್ ಬಂಧಿತ ಆರ್ಮಿ ವಾಹನದ ಚಾಲಕನಾಗಿದ್ದು . ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ.

ಈ ಕುರಿತು ಅನುಮಾನಗೊಂಡ ಗುಪ್ತಚರ ತಂಡ ರಾಮ್ ನಿವಾಸ್ ಚಲನವಲನ ಮೇಲೆ ಕಣ್ಣಿಟ್ಟಿತ್ತು.

ಸಂಶಯದ ಮೇಲೆ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಜಸ್ಥಾನದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದಿದ್ದ ರಾಮ್ ನಿವಾಸ್ ಪಾಕಿಸ್ತಾನದ ಸೇನೆಯ ಜೊತೆ ಸಂಪರ್ಕ ಹೊಂದಿದ್ದನು.

ಭಾರತೀಯ ಸೇನೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚಾಲಕ ಪಾಕಿಸ್ತಾನದ ಜೊತೆ ಹಂಚಿಕೊಳ್ಳುತ್ತಿದ್ದನು.

ಆರೋಪಿ ವಿಷಯ ಹಂಚಿಕೆ ಪ್ರತಿಫಲವಾಗಿ ಪಾಕಿಸ್ತಾನ ಸೇನಾಧಿಕಾರಿಗಳಿಗೆ ಹಣ ನೀಡುವಂತೆ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನ ಸಹ ಕಳುಹಿಸಿದ್ದನು ಎಂದು ಉಮೇಶ್ ಮಿಶ್ರಾ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

31/10/2020 10:03 pm

Cinque Terre

82.77 K

Cinque Terre

17