ಬೆಂಗಳೂರು- ವೇಶ್ಯಾವಾಟಿಕೆ ಹೆದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಖತರ್ನಾಕ್ ಟೀಮ್ ಪೊಲೀಸರ ಬಲೆಗೆ ಬಿದ್ದಿದೆ.
ಮಹಾನಗರದಲ್ಲಿ ಆಟೋ ಚಾಲಕನಾಗಿರುವ ಪ್ರೇಮನಾಥ್ ಹಾಗೂ ಆತನ ಹೆಂಡತಿ ಅಂಜಲಿ ಸೇರಿ ಪೈ ಲೇ ಔಟ್ ನಲ್ಲಿನ ತಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇತ್ತೀಚೆಗೆ ಪ್ರೇಮನಾಥ್ ಗೆ ಬಿಲ್ಡರ್ ಒಬ್ಬರ ಪರಿಚಯವಾಗಿದೆ. ಅವರೊಂದಿಗೆ ವ್ಯವಹಾರಕ್ಕಿಳಿದ ಪ್ರೇಮನಾಥ್ ತನ್ನ ಗಿರಾಕಿಯಾಗಿಸಿ ಮನೆಗೆ ಕರೆತಂದಿದ್ದಾನೆ. ನಂತರ ಮಹಿಳೆ ಇರುವ ಕೋಣೆಯಲ್ಲಿ ಬಿಲ್ಡರ್ ಇದ್ದಿದ್ದನ್ನು ವಿಡಿಯೋ ಮಾಡಿ ಅದನ್ನ ವೈರಲ್ ಮಾಡೋದಾಗಿ ಬೆದರಿಸಿದ್ದಾನೆ.
ಇದಿಷ್ಟೆ ಅಲ್ಲ. ಬಿಲ್ಡರ್ ಮೇಲೆ ಹಲ್ಲೆ ಮಾಡಿ ಅವರ ಬಳಿ ಇದ್ದ 100 ಗ್ರಾಂ ಚಿನ್ನದ ಸರ, 40 ಗ್ರಾಂ ಚಿನ್ನದ ಬ್ರಾಸ್ ಲೇಟ್ ಹಾಗೂ 25 ಸಾವಿರ ನಗದು ಕಿತ್ತುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಈಶ್ವರಿ ಎಂಬಾಕೆ ಮಾನವ ಹಕ್ಕುಗಳ ಸಂಘಟನೆ ಮುಖ್ಯಸ್ಥೆಯಾಗಿದ್ದಾಳೆ.
PublicNext
28/10/2020 06:41 pm