ಮುಂಬೈ-ಸೆಲೆಬ್ರಿಟಿಗಳಾದವರು ತಮ್ಮ ಅಬಿಮಾನಿಗಳಿಂದ ಹಾಗೂ ಸಾರ್ವಜನಿಕರಿಂದ ಸಾಕಷ್ಟು ಮುಜುಗುರಗಳನ್ನು ಅನಿಭವಿಸುತ್ತಲೇ ಇರ್ತಾರೆ. ಆದ್ರೆ ಇಲ್ಲಿ ಅದೆಲ್ಲಕ್ಕಿಂತ ಭಿನ್ನ ಘಟನೆ ನಡೆದಿದೆ.
ಬಾಲಿವುಡ್ ಕಿರುತೆರೆ ನಟಿ ಕವಿತಾ ಕೌಸಿಕ್ ಅವರು ಈಗ ಇಂತದ್ದೊಂದು ಇರುಸು ಮುರಿಸು ಅನಿಭವಿಸುತ್ತಿದ್ದಾರೆ. ಕಿರಾತಕನೊಬ್ಬ ಕವಿತಾ ಕೌಸಿಕ್ ಅವರಿಗೆ ಗುಪ್ತಾಂಗದ ಫೋಟೋ ಶೇರ್ ಮಾಡಿದ್ದಾನೆ. ಈ ಬಗ್ಗೆ ಆಕ್ರೋಶಿತರಾದ ನಟಿ ಕವಿತಾ ಕೌಸಿಕ್ ಟ್ವೀಟ್ ಮಾಡಿದ್ದಾರೆ. ಆರೋಪಿಯ ಫೋಟೋ ಪೋಸ್ಟ್ ಮಾಡಿ ಈತನ ಪತ್ತೆ ಹಚ್ಚುವುದು ಅಷ್ಟೇನು ಪ್ರಯಾಸವಲ್ಲ ಎಂದು ಕೂಡ ಹೇಳಿದ್ದಾರೆ. ಜೊತೆಗೆ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ ನಟಿ ಅಶ್ಲೀಲ ಫೋಟೋ ಕಳುಹಿಸಿದ ಕೀಚಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
PublicNext
22/10/2020 02:42 pm