ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಳಂಬೆಳಿಗ್ಗೆ ಅಧಿಕಾರಿ ನಿವಾಸದ ಮೇಲೆ ACB ರೇಡ್

ಬಾಗಲಕೋಟೆ: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಬೆಳ್ಳಂಬೆಳಿಗ್ಗೆ ಬಾಗಲಕೋಟೆಯಲ್ಲಿ ಅಧಿಕಾರಿಯ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದೆ.

ಬಾಗಲಕೋಟೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಸಿಸ್ಟಂಟ್ ಇಂಜಿನಿಯರ್ ಅಶೋಕ ತೋಪಲಕಟ್ಟಿ ಅವರ ನಿವಾಸ, ಕಚೇರಿ ಹಾಗೂ ಗ್ಯಾಸ್ ಎಜೆನ್ಸಿ ಸೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಾಗಲಕೋಟೆಯ ವಿದ್ಯಾಗಿರಿಯ 8ನೇ ಕ್ರಾಸ್ ನಲ್ಲಿರುವ ಅಶೋಕ ಅವರ ನಿವಾಸ, 17ನೇ ಕ್ರಾಸ್ ನಲ್ಲಿರುವ ಗ್ಯಾಸ್ ಏಜೆನ್ಸಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಚೇರಿ ಸೇರಿ ಮೂರು ಕಡೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಎಸಿಬಿ ಡಿವೈಎಸ್ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ, ಬಾಗಲಕೋಟೆ ಎಸಿಬಿ ಇನ್ಸ್ ಪೆಕ್ಟರ್ ಸಮೀರ್ ಮುಲ್ಲಾ, ಧಾರವಾಡ ಎಸಿಬಿ ಇನ್ಸ್ ಪೆಕ್ಟರ್ ಬಿಎ ಜಾಧವ್, ಅಧಿಕಾರಿಗಳು ಸಿಬ್ಬಂದಿ ಸೇರಿ ಒಟ್ಟು 20 ಜನರ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.

Edited By : Nirmala Aralikatti
PublicNext

PublicNext

22/10/2020 09:47 am

Cinque Terre

71.18 K

Cinque Terre

2

ಸಂಬಂಧಿತ ಸುದ್ದಿ