ರಾಯಚೂರು: ಮನೆ ಪಾಠಕ್ಕೆ ಹೋಗಿದ್ದ ಬಾಲಕನೊಬ್ಬ ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಕೃಷ್ಣಗಿರಿ ಹಿಲ್ಸ್‌ನಲ್ಲಿರುವ ಕೆರೆಯಲ್ಲಿ ನಡೆದಿದೆ.
8ನೇ ತರಗತಿ ವಿದ್ಯಾರ್ಥಿಯಾಗಿದ್ದ ಆದರ್ಶ್ (13) ಮೃತ ಬಾಲಕ. ಬಾಲಕ ಶನಿವಾರ ಬೆಳಗ್ಗೆ 8 ಗಂಟೆಗೆ ಮನೆ ಪಾಠಕ್ಕೆಂದು ಹೋಗಿದ್ದನು. ಆದರೆ ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಆದರೆ ಇಂದು ಕೆರೆಯಲ್ಲಿ ಶವ ಪತ್ತೆಯಾಗಿದೆ. ಆದರ್ಶ್ ಮನೆ ಪಾಠ ಮುಗಿಸಿದ ನಂತರ ಸ್ನೇಹಿತರೊಂದಿಗೆ ಕೆರೆಗೆ ತೆರಳಿದ್ದನು ಎನ್ನಲಾಗಿದೆ.
ಕೆರೆ ದಡದಲ್ಲಿ ಬೈಕ್ ಮತ್ತು ಬಟ್ಟೆ ಪತ್ತೆಯಾಗಿದ್ದವು. ನಂತರ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿದೆ ಅಗ್ನಿಶಾಮಕ ದಳ ಬಾಲಕನಿಗಾಗಿ ಕೆರೆಯಲ್ಲಿ ಶೋಧಕಾರ್ಯ ನಡೆಸಿದೆ. ಈ ವೇಳೆ ಆದರ್ಶ್ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.
PublicNext
11/10/2020 02:15 pm