ಬೆಂಗಳೂರು: ಐಸಿಸ್ ಶಂಕಿತ ಉಗ್ರರು ಸೆರೆಯಾದ ಬೆನ್ನೆಲ್ಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಬೆಂಗಳೂರಿನಲ್ಲಿ ಅಡಗಿರುವ ‘ಕುರಾನ್ ಸರ್ಕಲ್’ನ ಮತ್ತಷ್ಟು ಸದಸ್ಯರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಬಂಧಿತ ಶಂಕಿತ ಉಗ್ರಗಾಮಿಗಳ ಬಗ್ಗೆ ಕುತೂಹಲಕಾರಿ ಅಂಶಗಳು ಒಂದೊಂದೇ ಹೊರಗೆ ಬರತೊಡಗಿವೆ.
ಬೆಂಗಳೂರಿನಲ್ಲಿ ಸೆರೆಸಿಕ್ಕ ಶಂಕಿತರಾದ ಅಹ್ಮದ್ ಹಾಗೂ ಇರ್ಫಾನ್‌ನನ್ನು ಎನ್‌ಐಎ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಇದೀಗ ದೆಹಲಿಗೆ ಕರೆದೊಯ್ದಿದ್ದಾರೆ. ಇತ್ತ ಆರೋಪಿಗಳ ಮೊಬೈಲ್ ಕರೆಗಳು ಹಾಗೂ ವಾಟ್ಸಾಪ್‌ನಲ್ಲಿ ಗ್ರೂಪ್‌ಗಳನ್ನು ಪರಿಶೀಲಿಸಿದ ಎನ್‌ಐಎ ಅಧಿಕಾರಿಗಳು, ಕುರಾನ್ ಸರ್ಕಲ್ ಸದಸ್ಯರ ಪಟ್ಟಿಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
2014ರಲ್ಲಿ ಡಾ. ಬ್ರೇವ್‌ನನ್ನು ಸಿರಿಯಾಗೆ ಐಸಿಸ್ ತರಬೇತಿಗೆ ಕಳುಹಿಸಿದ್ದರ ಹಿಂದೆ ಕುರಾನ್ ಸರ್ಕಲ್ ಕೈವಾಡ ಇರುವುದು ಬಯಲಾಗಿದೆ. ಹಾಗಾಗಿ ದೆಹಲಿಯಲ್ಲಿ ಡಾ. ಬ್ರೇವ್ ಮತ್ತು ಕುರಾನ್ ಸರ್ಕಲ್‌ನ ಇಬ್ಬರೂ ಬಂಧಿತ ಸದಸ್ಯರನ್ನು ಎದುರುಬದುರು ಕೂರಿಸಿ ‘ಸಿರಿಯಾ ಯಾತ್ರೆ’ ಕುರಿತು ವಿಚಾರಣೆ ನಡೆಸಲು ಎನ್‌ಐಎ ಅಧಿಕಾರಿಗಳು ಮುಂದಾಗಿದ್ದಾರೆ.
PublicNext
10/10/2020 09:28 am