ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ದೇಹದ ತೂಕ ಇಳಿಸಿಕೊಂಡಿದ್ದಾರೆ. ದೇಹದ ಕೂತ ಇಳಿಸೋದು ದಚ್ಚುಗೆ ಹೊಸದೇನೂ ಅಲ್ಲ. ಈ ಹಿಂದೆ ಐರಾವತ ಚಿತ್ರಕ್ಕಾಗಿಯೇ ದರ್ಶನ್ ದೇಹದ ಕೊಬ್ಬು ಕರಗಿಸಿಕೊಂಡು ಸಖತ್ ಆಗಿಯೇ ಕಾಣಿಸಿಕೊಂಡಿದ್ದರು. ಆದರೆ, ಈಗ ಮತ್ಯಾವ ಚಿತ್ರಕ್ಕಾಗಿಯೇ ದರ್ಶನ್ ವೇಟ್ ಲಾಸ್ ಮಾಡಿಕೊಂಡಿದ್ದಾರೆ ಅಂತಿರೋ ? ಬನ್ನಿ, ಹೇಳ್ತಿವಿ..
ದಾಸ ದರ್ಶನ್ ಸದ್ಯ ಕ್ರಾಂತಿ ಚಿತ್ರದ ಕೆಲಸದಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿಯೇ ದೇಹದ ತೂಕವನ್ನ ಇಳಿಸಿಕೊಂಡಿದ್ದಾರೆ ಅನ್ನೋ ಮಾತು ಈಗ ಅಷ್ಟೇ ಸ್ಟ್ರಾಂಗ್ ಆಗಿಯೇ ಕೇಳಿ ಬರುತ್ತಿದೆ.
ಆದರೆ, ವಿಷಯ ಇದಲ್ಲ ಬಿಡಿ. ದರ್ಶನ್ ದೇಹವನ್ನ ಮತ್ತೆ ದಂಡಿಸೋಕೆ ಮತ್ತೊಂದು ಚಿತ್ರವೇ ಕಾರಣ ಆಗಿದೆ. ಅದ್ಯಾವ ಚಿತ್ರ ಅಂತಿರೋ. ಹೇಳ್ತಿವಿ ನೋಡಿ. ಯೋಗರಾಜ್ ಭಟ್ಟರು 'ಗರಡಿ' ಚಿತ್ರವನ್ನ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಕೂಡ ಒಂದು ಪ್ರಮುಖ ಪಾತ್ರವನ್ನೇ ಮಾಡ್ತಿದ್ದಾರೆ.
ಈ ಚಿತ್ರಕ್ಕಾಗಿಯೇ ದರ್ಶನ್ ಈ ಕಾಲದ ಜಿಮ್ ನಲ್ಲಿ ಬೆವರು ಇಳಿಸುತ್ತಿದ್ದಾರೆ. ದೇಹದವನ್ನ ಮತ್ತಷ್ಟು ಇನ್ನಷ್ಟು ಗಟ್ಟಿ ಮಾಡಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ಮತ್ಯಾವ ರೀತಿ ದರ್ಶನ್ ಕಾಣಿಸಿಕೊಳ್ತಿದ್ದಾರೆ ಅನ್ನೋ ಕುತೂಹಲ ಈಗಲೇ ಮೂಡಿದೆ.
PublicNext
02/05/2022 12:35 pm