ಮುಂಬೈ:ಬಾಲಿವುಡ್ ನಾಯಕ ನಟ ಆಮೀರ್ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ಮತ್ತೆ ಒಂದಾದ್ರೇ ? ಹೌದು ಅಂತಲೇ ಹೇಳುವಂತಿದೆ ಈ ಒಂದು ಫೋಟೋ. ಈ ಫೋಟೋದ ಅಸಲಿ ಅಸತ್ಯ ಏನೂ ಅನ್ನೋದನ್ನ ಹೇಳುತ್ತೇವೆ ಬನ್ನಿ.
ಆಮೀರ್ ಮಾಜಿ ಪತ್ನಿ ಕಿರಣ್ ಮತ್ತು ಆಮೀರ್ ಒಂದಾಗಿರೋದು ನಿಜ. ಆದರೆ ಪತಿ ಮತ್ತು ಪತ್ನಿ ಆಗಿ ಅಲ್ಲವೇ ಅಲ್ಲ. ನಿರ್ದೇಶಕಿ ಮತ್ತು ನಿರ್ಮಾಪಕ ಆಗಿಯೇ ಜೊತೆ ಆಗಿದ್ದಾರೆ.
ಕಿರಣ್ ಒಬ್ಬ ನಿರ್ದೇಶಕಿ ಕೂಡ ಹೌದು. ಧೋಬಿ ಘಾಟ್ ಅಂತ ಒಂದು ಸಿನಿಮಾವನ್ನ ಈ ಹಿಂದೆ ನಿರ್ದೇಶನ ಮಾಡಿದ್ದರು. ಅದಾಗಿ ಸುಮಾರು ವರ್ಷಗಳೇ ಕಳೆದು ಹೋಗಿವೆ. ಈಗ ಮತ್ತೆ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಅದರ ಒಟ್ಟು ಜವಾಬ್ದಾರಿಯನ್ನ ಆಮೀರ್ ಖಾನ್ ಹೊತ್ತುಕೊಂಡಿದ್ದಾರೆ. ಅದಕ್ಕೇನೆ ಜೊತೆಯಾಗಿಯೇ ಕೆಲಸ ಮಾಡುತ್ತಿದ್ದಾರೆ. ಜೊತೆಗೇನೇ ಫೋಟೋ ತೆಗೆಸಿಕೊಂಡಿದ್ದಾರೆ.
ಉಳಿದಂತೆ ಕಿರಣ್ ತಮ್ಮ ಈ ಹೊಸ ಚಿತ್ರದ ಚಿತ್ರೀಕರಣವನ್ನ ಪುಣೆಯಲ್ಲಿಯೇ ಜನವರಿ-20 ವರೆಗೂ ಮಾಡುತ್ತಿದ್ದಾರೆ. ಆ ಬಳಿಕ ಮುಂಬೈನ ಇತರ ಜಾಗದಲ್ಲಿಯೇ ಈ ಚಿತ್ರದ ಚಿತ್ರೀಕರಣ ಪ್ಲಾನ್ ಮಾಡಲಾಗಿದೆ.
PublicNext
17/01/2022 09:20 pm