ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ದದ್ಲಾನಿ ತಂದೆ ಕೋವಿಡ್‌ಗೆ ಬಲಿ

ಮುಂಬೈ: ಬಾಲಿವುಡ್‌ನ ಖ್ಯಾತ ಗಾಯಕ ವಿಶಾಲ್ ದದ್ಲಾನಿ ಅವರ ತಂದೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವಿಶಾಲ್ ದದ್ಲಾನಿ ಅವರು ತಮ್ಮ ತಂದೆಯ ನಿಧನದ ಬಳಿಕ ಜೀವನವನ್ನು ಹೇಗೆ ನಡೆಸಬೇಕು ಎಂದು ತಿಳಿಯುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ನನ್ನ ಬೆಸ್ಟ್ ಫ್ರೆಂಡ್, ಅತ್ಯುತ್ತಮ ವ್ಯಕ್ತಿ ಮತ್ತು ಹೃದಯವಂತನಾಗಿರುವ ನನ್ನ ತಂದೆ ಮೋತಿ ದದ್ಲಾನಿ ಅವರನ್ನು ಕಳೆದ ರಾತ್ರಿ ಕಳೆದುಕೊಂಡಿದ್ದೇನೆ. ಜೀವನ ಪೂರ್ತಿ ಉತ್ತಮ ತಂದೆಯಾಗಿರಲು ಮತ್ತು ಉತ್ತಮ ವ್ಯಕ್ತಿಯಾಗಿರುವಂತೆ ನಾನು ಎಂದಿಗೂ ಕೇಳಲಿಲ್ಲ. ನನ್ನಲ್ಲಿ ಏನಾದರೂ ಒಳ್ಳೆಯದು ಅಂತ ಇದ್ದರೆ, ಅದು ಅವರಿಂದ ಮಾತ್ರ. ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಐಸಿಯುನಲ್ಲಿದ್ದರು. ಆದರೆ ನಿನ್ನೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನನ್ನ ತಾಯಿಯ ಜೊತೆ ಕೂಡ ನನಗೆ ಇರಲು ಸಹ ಸಾಧ್ಯವಾಗುತ್ತಿಲ್ಲ. ಇದು ನಿಜವಾಗಿಯೂ ಅನ್ಯಾಯ ಎಂದು ವಿಶಾಲ್ ದದ್ಲಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ಅದೃಷ್ಟವಶಾತ್ ನನ್ನ ಸಹೋದರಿ ನಾನು ಮಾಡುವುದಕ್ಕಿಂತ ಹೆಚ್ಚಿನ ಶಕ್ತಿಯಿಂದ ಎಲ್ಲವನ್ನು ನಿಭಾಯಿಸುತ್ತಿದ್ದಾಳೆ. ನನ್ನ ತಂದೆ ಇಲ್ಲದ ಜಗತ್ತಿನಲ್ಲಿ ಹೇಗೆ ಬದುಕಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಸಂಪೂರ್ಣವಾಗಿ ಎಲ್ಲವನ್ನು ಕಳೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

08/01/2022 05:35 pm

Cinque Terre

44.5 K

Cinque Terre

0