ಬೆಂಗಳೂರು : 450 ಕೋಟಿ ರೂ. ಬಜೆಟ್ ನಲ್ಲಿ ಸತತ ಮೂರು ವರ್ಷಗಳಿಂದ ನಿರಂತರವಾಗಿ ಚಿತ್ರೀಕರಣ ಮಾಡಲಾದ RRR ಸಿನಿಮಾ ಜ.7 ಕ್ಕೆ ತೆರೆಕಾಣಬೇಕಿತ್ತು.ಆದರೆ ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ RRR ಚಿತ್ರ ಜ.7 ಕ್ಕೆ ತೆರೆಕಾಣುವುದು ಬಹುತೇಕ ಕಷ್ಟ.ಹೌದು ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಚಿತ್ರತಂಡಕ್ಕೆ ಕೋವಿಡ್ ಆತಂಕ ಶುರುವಾಗಿದೆ. ಹಾಗಾಗಿಯೇ ಚಿತ್ರ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಚಿತ್ರತಂಡ ನಾಳೆ ಬೆಂಗಳೂರಿನಲ್ಲಿ ನಡೆಸಬೇಕಿದ್ದ ಚಿತ್ರದ ಪ್ರಚಾರಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಮಾತ್ರವಲ್ಲದೆ ಆನ್ ಲೈನ್ ನಲ್ಲಿ ಟಿಕೇಟ್ ಬುಕ್ ಮಾಡಲು ಸಹ ಸಾಧ್ಯಗುತ್ತಿಲ್ಲ.
ಇತ್ತ ಅಂದುಕೊಂಡ ದಿನವೇ 'ಆರ್ ಆರ್ ಆರ್' ರಿಲೀಸ್ ಆಗಲಿದೆ ಎಂದು ಸಿನಿಮಾ ನಿರ್ಮಾಪಕರು ಹೇಳಿದ್ದಾರೆ. ಈಗಾಗಲೇ ಕೊರೊನಾ ಲಾಕ್ಡೌನ್ ಕಾರಣದಿಂದ 2-3 ಬಾರಿ ಚಿತ್ರದ ಬಿಡುಗಡೆ ದಿನಾಂಕ ಬದಲಾಗಿತ್ತು. ಇದೀಗ ಅಂತಿಮವಾಗಿ 2022ರ ಜನವರಿ 7ರಂದು ತೆರೆಗೆ ಬರಲು ಚಿತ್ರತಂಡ ಸಜ್ಜಾಗಿದೆ. ಎಷ್ಟೇ ಸಮಸ್ಯೆಗಳು ಬಂದರೂ, ಅಂದೇ ಚಿತ್ರವನ್ನು ತೆರೆಕಾಣಿಸುವುದಾಗಿ ನಿರ್ಮಾಪಕರು ನಿರ್ಧಾರ ಮಾಡಿದ್ದಾರಂತೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿ, ಥಿಯೇಟರ್ ಗೆ ಬರಲು ಸಕಲ ರೀತಿಯಿಂದಲೂ ಸಿನಿಮಾತಂಡ ತಯಾರಾಗಿದೆ.
PublicNext
01/01/2022 12:23 pm