ನವದೆಹಲಿ: ದಂಗಲ್ ಚಿತ್ರದ ಬಬಿತಾ ಕುಮಾರಿ ಚಿತ್ರ ಖ್ಯಾತಿಯ ನಟಿ ಸಾನ್ಯಾ ಮಲ್ಹೋತ್ರಾ ಕದ್ದ ಸೀರೆಯನ್ನ ಮದುವೆಗೂ ಉಟ್ಟುಕೊಂಡು ಹೋಗಿದ್ದರಂತೆ. ಇದನ್ನ ಅದ್ಯರೋ ಹೇಳ್ತಿಲ್ಲ ಸ್ವತಃ ಸಾನ್ಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅಂದ್ಹಾಗೆ ಸಾನ್ಯಾ ಆ ಸೀರೆಯನ್ನ ಎಲ್ಲು ಕದ್ದಿದ್ದಾರೆ ಅಂತಲೂ ಹೇಳಿಕೊಂಡಿದ್ದಾರೆ. ಹೌದು ಮೊದಲ ಲಾಕ್ ಡೌನ್ ಮುಗಿದ ತಕ್ಷಣ ಸಾನ್ಯಾ ಅಭಿನಯದ ಮೀನಾಕ್ಷಿ ಸುರೇಶ್ಚಂದ್ರ ಚಿತ್ರೀಕರಣ ಶುರು ಆಗಿದೆ. ಆ ಚಿತ್ರದಲ್ಲಿ ಸಾರಿ ಉಟ್ಟುಕೊಳ್ಳುವ ಪಾತ್ರವನ್ನೆ ನಿರ್ವಹಿಸಿದ್ದಾರೆ.
ಚಿತರೀಕರಣ ಮುಗಿದ ಬಳಿಕ ಆ ಸೀರೆಯನ್ನ ಹೇಳದೆ ಕೇಳದೇ ಮನೆಗೆ ತೆಗೆದುಕೊಂಡು ಬಂದಿದ್ದಾರೆ.ಸೀರೆ ಅಂದ್ರೆ ನನಗೆ ಪಂಚ ಪ್ರಾಣ ಅದಕ್ಕೆ ತೆಗೆದುಕೊಂಡು ಬಂದಿದ್ದೇನೆ. ಅವು ನನ್ನ ಬಳಿನೇ ಇವೆ ಅಂತೂ ಸಾನ್ಯಾ ಹೇಳಿಕೊಂಡಿದ್ದಾರೆ. ಸಾನ್ಯಾ ಅಭಿನಯದ ಲವ್ ಹಾಸ್ಟೇಲ್ ಚಿತ್ರ ರಿಲೀಸ್ ಆಗಬೇಕಿದೆ. ಸದ್ಯ ಮೇಘನಾ ಗುಲ್ಜಾರ್ ನಿರ್ದೇಶನದ ಸ್ಯಾಬ್ ಬಹದ್ದೂರ್ ಚಿತ್ರವನ್ನ ಒಪ್ಪಿಕೊಂಡಿದ್ದಾರೆ.
PublicNext
30/12/2021 01:16 pm