ಮುಂಬೈ: ತುಂಡು ಉಡುಗೆಗಳಿಂದಲೇ ಗುರುತಿಸಿಕೊಂಡು ಬಿಗ್ ಬಾಸ್ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದ ಈ ನಟಿ ಉರ್ಫಿ ಜಾವೇದ್. ಇಸ್ಲಾಂ ಧರ್ಮಕ್ಕೆ ಸೇರಿದವಳಾಗಿದ್ದರು ಮದುವೆಗೆ ಸಂಬಂಧಿಸಿದಂತೆ ನಾನಂತೂ ಮುಸ್ಲಿಂ ಹುಡುಗನನ್ನ ಮದ್ವೆಯಾಗಲ್ಲ ಎಂದ ಹೇಳಿಕೆ ಮುಸ್ಲಿಮರಲ್ಲಿ ಕಿಚ್ಚು ಹಚ್ಚಿತ್ತು.
ನಟಿಯ ವಿರುದ್ಧ ಭಾರಿ ಆಕ್ರೋಶವೂ ವ್ಯಕ್ತವಾದ ಬೆನ್ನಲ್ಲೇ ನಟಿ 'ನಾನು ಮುಸ್ಲಿಂ ಹುಡುಗಿ. ಆದರೆ ನಮ್ಮ ಧರ್ಮದಲ್ಲಿನ ಪುರುಷರ ಮನಸ್ಥಿತಿ ಹೇಗಿದೆ ಎಂದರೆ ಮಹಿಳೆಯರು ಅವರು ಹೇಳಿದ ರೀತಿಯೇ ನಡೆದುಕೊಳ್ಳಬೇಕು ಎನ್ನುವುದು. ಈ ಮೂಲಕ ಮುಸ್ಲಿಂ ಸಮುದಾಯದ ಎಲ್ಲ ಮಹಿಳೆಯರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅವರು ಬಯಸುತ್ತಾರೆ. ಇದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಆದ್ದರಿಂದ ಇಸ್ಲಾಂ ಧರ್ಮದ ಮೇಲೆಯೇ ನನಗೆ ನಂಬಿಕೆ ಹೊರಟುಹೋಗಿದೆ. ಇನ್ನು ಮದುವೆ ನಾನಂತೂ ಉಫ್ ಮುಸ್ಲಿಂ ಹುಡುಗನನ್ನು ಮದುವೆಯಾಗಲಾರೆ' ಎಂದಿದ್ದಾಳೆ.
'ನಾನೀಗ ಭಗವದ್ಗೀತೆ ಓದುತ್ತಿದ್ದೇನೆ. ಆ ಧರ್ಮದ ಬಗ್ಗೆ ನಾನು ಹೆಚ್ಚು ತಿಳಿದುಕೊಳ್ಳಲು ಬಯಸಿದ್ದೇನೆ. ಇದರಲ್ಲಿ ಇರುವ ತಾರ್ಕಿಕ ವಿಚಾರಗಳ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇದೆ. ಮೂಲಭೂತವಾದವನ್ನು ನಾನು ದ್ವೇಷಿಸುತ್ತೇನೆ. ಈ ಪವಿತ್ರ ಗ್ರಂಥದಲ್ಲಿ ಇರುವ ಒಳ್ಳೆಯ ಅಂಶಗಳನ್ನು ಪಡೆದುಕೊಳ್ಳಬೇಕು ಎಂದುಕೊಂಡಿದ್ದೇನೆ' ಎಂದಿದ್ದಾಳೆ.
'ನನ್ನ ಡ್ರೆಸ್ ನೋಡಿ ಮುಸ್ಲಿಂ ಜನರಿಂದಲೇ ನನಗೆ ಹೆಚ್ಚು ದ್ವೇಷದ ಕಮೆಂಟ್ ಗಳು ಬರುತ್ತಿವೆ. ಇಸ್ಲಾಂ ಧರ್ಮದ ಇಮೇಜ್ ಹಾಳುಮಾಡುತ್ತಿದ್ದೇನೆ ಅಂತ ಅವರು ನನ್ನ ಮೇಲೆ ಆರೋಪ ಹೊರಿಸುತ್ತಾರೆ, ನಾನು ಹೇಗೆ ಬೇಕಾದರೂ ಇರುವ ಹಕ್ಕು ನನಗೆ ಇದೆ. ನನ್ನನ್ನು ಪ್ರಶ್ನಿಸಲು ಅವರು ಯಾರು? ಇಂಥದ್ದೊಂದು ಕೆಟ್ಟ ಕಮೆಂಟ್ಗಳನ್ನು ಮುಸ್ಲಿಮರಿಂದ ಮಾತ್ರ ಕಾಣಲು ಸಾಧ್ಯ. ಆದ್ದರಿಂದ ನಮ್ಮ ಧರ್ಮದ ಹುಡುಗನನ್ನು ಖಂಡಿತವಾಗಿಯೂ ಮದುವೆಯಾಗಲಾರೆ' ಎಂದಿದ್ದಾಳೆ ಉರ್ಫಿ.
PublicNext
28/12/2021 02:45 pm