ಇಂದು ಸ್ಟಾರ್ ನಟಿ ನಯನತಾರಾ ಅವರಿಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಇನ್ನು ಅಭಿಮಾನಿಗಳು, ಸೆಲೆಬ್ರಿಟಿಗಳು ನಯನತಾರಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.
ಇನ್ನು ಈ ನಟಿಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವ ಅವರ ಗುಣವೇ ಎಲ್ಲರ ಮೆಚ್ಚುಗೆ ಕಾರಣವಾಗಿದೆ. ಇನ್ನು ಸೋಶಿಯಲ್ ಮೀಡಿಯಾದಿಂದ ದೂರ ಇರುವ ಅವರು ಖಾಸಗಿತನ ಕಾಪಾಡಿಕೊಳ್ಳಲು ಬಯಸುತ್ತಾರಂತೆ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರಾ ಮದುವೆ ಬಗ್ಗೆ ಆಗಾಗ ಏನಾದರೊಂದು ಸುದ್ದಿ ಕೇಳಿ ಬರುತ್ತಲಿರುತ್ತದೆ. ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ನಯನತಾರಾ ಪ್ರೀತಿ ಮಾಡುತ್ತಿದ್ದು, ಯಾವಾಗ ಮದುವೆ ಎಂಬುದನ್ನು ರಿವೀಲ್ ಮಾಡಬೇಕಿದೆ.
PublicNext
18/11/2021 04:28 pm