ಬೆಂಗಳೂರು: ಅಭಿಮಾನಿಗಳ ಪಾಲಿನ ಅಪ್ಪು ಅಸ್ತಂಗತರಾಗಿ 13 ದಿನ ಕಳೆದಿದೆ. ಮನೆ ಮಗನನ್ನು ಕಳೆದುಕೊಂಡ ಶೋಕದಲ್ಲಿ ರಾಜ್ ಕುಟುಂಬ ಕಣ್ಣೀರಿಟ್ಟಿದೆ. ಪ್ರೀತಿಯ ತಮ್ಮ ಅಪ್ಪು ಅಗಲಿದ ನಂತರ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿ ಹಳೆಯ ನೆನಪುಗಳ ಕುರಿತಾಗಿ ಪೋಸ್ಟ್ ಹಾಕುತ್ತಿದ್ದಾರೆ.
ನಿನ್ನೆ ಮಂಗಳವಾರ ಬೆಳಿಗ್ಗೆ ವರನಟ ಡಾ. ರಾಜ್‌ಕುಮಾರ್ ಅವರೊಂದಿಗೆ ಅಪ್ಪು ಅವರ ಬಾಲ್ಯದ ಫೋಟೋಗಳನ್ನು ಪೋಸ್ಟ್ ಮಾಡಿದ್ದ ರಾಘವೇಂದ್ರ ರಾಜ್‌ಕುಮಾರ್ ಭಾವುಕ ಸಾಲುಗಳನ್ನು ಬರೆದಿದ್ದರು. "ಅಪ್ಪು ಮಗನೇ ನಿರುದ್ಯೋಗಿ ಆಗಿದ್ದ ನನಗೆ ನೀನು ಸಮಾಜ ಸೇವೆಯ ಕೆಲಸ ಕೊಟ್ಟು ಹೋಗಿರುವೆ. ಯಾರಿಗೂ ತಿಳಿಯದಂತೆ ಮಹತ್ಕಾರ್ಯಗಳನ್ನು ನೀನು ಮಾಡಿದ್ದೆ. ನಿನ್ನಂತೆ ಅದೇ ರೀತಿ ಸಮಾಜ ಸೇವೆ ಮಾಡುವ ಬುದ್ಧಿ ನನಗೂ ಆ ದೇವರು ಕೊಡಲಿ" ಎಂದು ರಾಘಣ್ಣ ಪೋಸ್ಟ್ ಹಾಕಿದ್ದರು.
ರಾಘವೇಂದ್ರ ರಾಜ್‌ಕುಮಾರ್ ಹಾಕಿದ್ದ ಈ ಭಾವುಕ ಪೋಸ್ಟ್‌ಗೆ ಅಭಿಮಾನಿಗಳು ತಮ್ಮ ಮನದಾಳದ ಮಾತುಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ' ಅಣ್ಣ ತಮ್ಮಂದಿರು ಹೋದ್ರೆ ಅವನ ಆಸ್ತಿಲಿ ಎಸ್ಟು ಕೊಳ್ಳೆ ಹೊಡೆಯಬಹುದು ಅನ್ನೋ ಈ ಕಾಲದಲ್ಲಿ ಇಷ್ಟೊಂದು ನಮ್ಮ ಅಪ್ಪು ಬಗ್ಗೆ ಬಾಯಿ ತುಂಬ ಮಗನೇ ಅಂತಿರಲ್ಲ ರಾಘಣ್ಣ ಅದಕ್ಕೆ ಹೇಳೋದು ದೊಡ್ಡವರು ತುಂಬಿದ ಕೊಡ ತುಳುಕುವುದಿಲ್ಲ' ಎಂದು ಓರ್ವ ಅಭಿಮಾನಿ ಕಾಮೆಂಟ್ ಹಾಕಿದ್ದಾರೆ.
ಅದರಂತೆ "ನಿಮ್ಮ ಪ್ರತಿಯೊಂದು ನುಡಿಗಳಿಂದ ದೊಡ್ಡ ಮನೆಯ ಸೇವಾಕಾಯ೯ ಮತ್ತಷ್ಟು ದ್ವಿಗುಣಗೊಂಡಿದೆ ಹಾಗೂ ಸಮಾಜದ ಅದೆಷ್ಟೋ ಜನತೆಯ ಸಮಾಜಮುಖಿ ಕಾರ್ಯದತ್ತ ಒಲವು ಇಮ್ಮಡಿಯಾಗುವಂತೆ ಮಾಡಿ ಪ್ರತಿಯೊಬ್ಬರ ಮನದಲ್ಲಿ ನಿಮ್ಮ ಬಗ್ಗೆ ಹಾಗೂ ಅಣ್ಣವ್ರ ಕುಟುಂಬದ ಪ್ರತಿಯೊಬ್ಬ ಸದಸ್ಯರಲಿ ಆ ಗೌರವ ಭಾವನೆ ಜಾಸ್ತಿ ಆಗಿದ್ದಂತು ಸುಳ್ಳಲ್ಲ ಸರ್" ಎಂದು ಇನ್ನೊಬ್ಬ ಅಭಿಮಾನಿ ಅಭಿಮಾನದಿಂದ ಕಾಮೆಂಟ್ ಮಾಡಿದ್ದಾರೆ.
PublicNext
10/11/2021 02:32 pm