ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಸಾವು ಒಪ್ಪದ ಅಭಿಮಾನಿಗಳು : ಸಿಬಿಐ ನಿಂದ ಸಾವಿನ ತನಿಖೆ ನಡೆಸುವಂತೆ ಆಗ್ರಹ

ರಾಯಚೂರು: ಫಿಟ್ ಆ್ಯಂಡ್ ಫೈನ್ ಆಗಿದ್ದು ಅಪ್ಪು ಸಾವನ್ನು ಒಪ್ಪದ ಜನ ಅವರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಹೌದು ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಎಮ್.ಮೈತ್ರೀಕರ್, ಸಾವಿನ ತನಿಖೆ ಆಗಬೇಕಿದೆ. ಪುನೀತ್ ಅವರ ಸಾವಿನ ಹಿಂದಿನ ರಹಸ್ಯ ಗೊತ್ತಾಗಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾವಿನ ಬಗ್ಗೆ ಸಂಶಯ ಬರಲು ಕಾರಣವೇನು?

ಪುನೀತ್ ಅವರು, ನಿಧನರಾಗುವ ಹಿಂದಿನ ರಾತ್ರಿ (ಅ.28) ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ತುಂಬಾ ಸಂತಸದಿಂದ ಪಾಲ್ಗೊಂಡು ಹಾಡು, ನೃತ್ಯ ಮಾಡಿದ್ದರು. ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಮಾರನೆಯ ದಿನ ಹೃದಯಾಘಾತ ಆಗಿದ್ದು ಹೇಗೆ ಎನ್ನುವುದು ಸಮಿತಿಯ ಪ್ರಶ್ನೆ.

ಆದ್ದರಿಂದ ಈ ಪಾರ್ಟಿಯಲ್ಲಿ ಕಾಣದ ಕೈಗಳು ಕುತಂತ್ರ ನಡೆಸಿ ಊಟ ಅಥವಾ ಕೂಲ್ ಡ್ರಿಂಕ್ಸ್ ಸೇವನೆಯಲ್ಲಿ ಮೋಸ ನಡೆದಿರಬಹುದು. ವಿಷಪ್ರಾಷನ ಆಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಿರುವ ಎನ್.ಎಮ್.ಮೈತ್ರೀಕರ್, ಈ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

Edited By : Nirmala Aralikatti
PublicNext

PublicNext

04/11/2021 09:44 pm

Cinque Terre

43.17 K

Cinque Terre

14