ಮೈಸೂರು: ಹುಡುಗರು ಹುಡ್ಗಿಗಾಗಿ ಕೈ ಕೊಯ್ದುಕೊಂಡು ರಕ್ತದಲ್ಲಿ ಪತ್ರ ಬರೆದು ಐ ಲವ್ ಯು ಅಂತ ಹೇಳ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ತನ್ನ ನೆಚ್ಚಿನ ನಾಯಕನ ಹೆಸರನ್ನ ಕೈ ಮೇಲೆ ಬರೆದುಕೊಂಡು ಅತೀವ ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದಾಳೆ.
ಆ ನೆಚ್ಚಿನ ನಾಯಕ ಕನ್ನಡ ನಾಡಿನ ಸೂಪರ್ ಸ್ಟಾರ್. ಈಗ ಆ ನಾಯಕ ಭೂಮಿ ಮೇಲಿಲ್ಲ. ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿಯೇ ಇದ್ದಾರೆ. ಹೌದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿನೇ ಬ್ಲೇಡ್ ನಿಂದ ಕೈಕೊಯ್ದುಕೊಂಡ ಅಪ್ಪಟ್ಟ ಅಪ್ಪು ಅಭಿಮಾನಿ.ಅಪ್ಪು ಇಲ್ಲದ್ದನ್ನ ಅರಗಿಸಿಕೊಳ್ಳಲು ಆಗದ ಈ ಅಭಿಮಾನಿಯ ಹೆಸರು ಯಶಸ್ವಿನಿ.
ಇಲ್ಲಿಯ ಖಾಸಗಿ ಕಾಲೇಜಿನಲ್ಲಿ ಇನ್ನೂ ಪಿಯುಸಿ ಓದುತ್ತಿದ್ದಾಳೆ. ಕೈ ಮೇಲೆ ಅಪ್ಪು ಅಂತ ಬರೆದುಕೊಂಡಿದ್ದಾಳೆ. ಬಿಳಿ ಹಾಳೆ ಮೇಲು ಅಪ್ಪು ಐ ಲವ್ ಯು ಅಂತಲೂ ಬರೆದಿದ್ದಾಳೆ.ಇದರಿಂದ ಅತಿ ಹೆಚ್ಚು ರಕ್ತಸ್ರಾವ ಆಗಿದೆ. ಅದಕ್ಕೆನೆ ಈಗ ಅಪ್ಪು ಅಭಿಮಾನಿ ಆಸ್ಪತ್ರೆಗೂ ದಾಖಲಾಗಿದ್ದಾಳೆ.
PublicNext
03/11/2021 07:14 pm