ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಭಿಮಾನಿ ಸ್ನೇಹಿತರಿಗೆ ಸುದೀರ್ಘ ಪತ್ರ: ಕ್ಷಮೆ ಕೇಳಿದ ಕಿಚ್ಚ

ಬೆಂಗಳೂರು:ಕೋಟಿಗೊಬ್ಬ-3 ಚಿತ್ರ ತಾಂತ್ರಿಕ ಕಾರಣದಿಂದ ಇಂದು ರಿಲೀಸ್ ಆಗುತ್ತಿಲ್ಲ. ಬದಲಿಗೆ ನಾಳೆ ಅಂದ್ರೆ, ಅಕ್ಟೋಬರ್-15 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ದಿಢೀರ್ ಬೆಳವಣಿಗೆಯಿಂದಲೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದಕ್ಕೆ ಸ್ವತಃ ಸುದೀಪ್ ಟ್ವಿಟರ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಆಯಾಚಿಸಿದ್ದಾರೆ.

ಕಿಚ್ಚನ ಕೋಟಿಗೊಬ್ಬ-3 ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಅದರಂತೆ ಅಕ್ಟೋಬರ್-14 ರಂದು ಚಿತ್ರ ತೆರೆಗೆ ಬರುತ್ತದೆ ಅಂತಲೇ ಇಂದು ಥಿಯೇಟರ್ ಬಳಿಗೆ ಬಂದು ಜನಕ್ಕೆ ನಿರಾಶೆ ಆಗಿದೆ. ಇದರಿಂದ ಸಹಜವಾಗಿಯೇ ಕಿಚ್ಚನ ಅಭಿಮಾನಿಗಳು ಕೆರಳಿದ್ದರು. ಸದ್ದು-ಗದ್ದವನ್ನೂ ಥಿಯೇಟರ್ ಅಂಗಳದಲ್ಲಿ ಮಾಡಿದರು. ಇದನ್ನೆಲ್ಲ ಅರಿತುಕೊಂಡ ಕಿಚ್ಚ ಸುದೀಪ್,ತಕ್ಷಣವೇ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಸಮಸ್ತ ನಾಡಿನ ತಮ್ಮ ಅಭಿಮಾನಿ ಸ್ನೇಹಿತರಿಗೆ ಮನವಿ ಪತ್ರ ಬರೆದು ಕ್ಷಮೆ ಕೇಳಿದರು.

ಪತ್ರದ ಸಾರಾಂಶ ಹಿಂಗಿದೆ:

ಅಭಿಮಾನಿ ಸ್ನೇಹಿತರಿಗೆ ಕೋಟಿಗೊಬ್ಬ-3 ಚಿತ್ರದ ರಿಲೀಸ್ ಟೈಮ್ ಬಗ್ಗೆ ತಿಳಿಸೋದು ನನ್ನ ಆದ್ಯ ಕರ್ತವ್ಯ. ಹಲವು ಕಾರಣಗಳಿಂದಲೇ ಚಿತ್ರ ಇಂದು ರಿಲೀಸ್ ಆಗುತ್ತಿಲ್ಲ. ಯಾವಾಗ ರಿಲೀಸ್ ಆಗುತ್ತದೆ ಅನ್ನೋದನ್ನ ಕೂಡ ಅತಿ ಶೀಘ್ರದಲ್ಲಿಯೆ ತಿಳಿಸುತ್ತೇನೆ. ಆದರೆ, ಅಭಿಮಾನಿ ಸ್ನೇಹಿತರಾದ ನೀವೂ ಥಿಯೇಟರ್ ಅಂಗಳದಲ್ಲಿ ಯಾವುದೇ ರೀತಿಯ ಹಾನಿಯನ್ನ ಮಾಡಲೇಬಾರದು. ಇದು ನನ್ನ ಮನವಿ ಅಂತ ಪತ್ರದಲ್ಲಿ ಕೇಳಿಕೊಂಡಿದ್ದಾರೆ ಸುದೀಪ್.

Edited By :
PublicNext

PublicNext

14/10/2021 12:44 pm

Cinque Terre

71.64 K

Cinque Terre

1