ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನುಶ್ರೀ ಮುಖವಾಡ ಕಳಚಿದೆ, ಶೀಘ್ರದಲ್ಲೇ ಅರೆಸ್ಟ್ ಭಾಗ್ಯ: ಸಂಬರಗಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಮುಖವಾಡ ಕಳಚಿದೆ. ಜೈಲಿಗೆ ಹೋಗುವುದು ಪಕ್ಕಾ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2020ರಲ್ಲಿ ಶುಗರ್ ಡ್ಯಾಡಿ ಎಂದು ಟ್ವೀಟ್ ಮಾಡಿದ್ದೆ. ಆಗ ಮಾಜಿ ಸಿಎಂ ಒಬ್ಬರು ಊಹಾಪೋಹಕ್ಕೆ ನಾಂದಿ ಹಾಡಿದ್ದರು. ಮುಂದಿನ ದಿನಗಳಲ್ಲಿ ಈ ಕುರಿತ ಆಡಿಯೋ ರಿಲೀಸ್ ಮಾಡ್ತೀನಿ. ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀಯನ್ನು ಬಿಟ್ಟುಕಳುಹಿಸಲಾಗಿದೆ. ತನಿಖೆ ನಡೆಸುತ್ತಿದ್ದ ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ನಾಯಕ್ ಎತ್ತಂಗಡಿ ಮಾಡಲಾಗಿದೆ. ಕೇಸ್‌ನಲ್ಲಿ ಮಂಗಳೂರು ಪೊಲೀಸರು ವೀಕ್ ಆಗಿದ್ದಾರೆ. ಪ್ರಕರಣದ ಮರು ತನಿಖೆಯಾಗಬೇಕು" ಎಂದು ಆಗ್ರಹಿಸಿದರು.

ಡ್ರಗ್ಸ್ ಪ್ರಕರಣದಲ್ಲಿ ಕಿಶೋರ್ ಶೆಟ್ಟಿ, ತರುಣ್ ಬಂಧನವಾದಾಗಲೇ ತರುಣ್, ಅನುಶ್ರೀ ಡ್ರಗ್ಸ್ ಸೇವನೆ ಹಾಗೂ ಪೆಡ್ಲಿಂಗ್ ಬಗ್ಗೆ ಬಾಯ್ಬಿಟ್ಟಿದ್ದ. ಅನುಶ್ರೀ ಬಚಾವ್ ಮಾಡಲು ಬಳಿಕ ತರುಣ್ ನನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸ್ ವಿಚಾರಣೆಗೆ ಹಾಜರಾಗಲು ಅನುಶ್ರೀ ನಾಟಕ ಆಡಿದ್ರು. ಬಳಿಕ ಫೇಸ್ ಬುಕ್ ಲೈವ್ ಗೆ ಬಂದು ನಾಟಕ ಮಾಡಿದ್ರು. ನನ್ನನ್ನು ಸ್ತ್ರೀ ವಿರೋಧಿ ಎನ್ನುವ ರೀತಿ ಬಿಂಬಿಸಿದರು ಎಂದು ಗುಡುಗಿದ್ದಾರೆ.

ಅಲ್ಲದೇ ಅನುಶ್ರೀ ಮಂಗಳೂರಿನಲ್ಲಿ 12 ಕೋಟಿ ರೂಪಾಯಿ ಮನೆ ಕಟ್ಟಿಸಿದ್ದಾರೆ. ಬೆಂಗಳೂರಿನಲ್ಲಿ 4 ಕೋಟಿ ಮೌಲ್ಯದ ಮನೆ ನಿರ್ಮಿಸಿದ್ದಾರೆ. ಇದಕ್ಕೆಲ್ಲ ಹಣ ಟಿವಿ ಶೋದಿಂದಲೇ ಬಂದಿದ್ದರೆ ಒಳ್ಳೆಯದು. ಆದರೆ ಅನುಶ್ರೀ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.

Edited By : Vijay Kumar
PublicNext

PublicNext

08/09/2021 03:46 pm

Cinque Terre

58.96 K

Cinque Terre

10