ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿರಾ ಪಾತ್ರದಲ್ಲಿ ಲಾರಾ ದತ್ತಾ: ಮೇಕೋವರ್ ವಿಡಿಯೋ ವೈರಲ್

ರಂಜಿತ್ ಎಂ ತಿವಾರಿ ನಿರ್ದೇಶನದ ಬೆಲ್ ಬಾಟಮ್ ಸಿನಿಮಾ ಟ್ರೇಲರ್ ಮಂಗಳವಾರ ಸಂಜೆ ಬಿಡುಗಡೆಯಾಗಿದೆ. ಈ ಟ್ರೇಲರ್ ನೋಡಿದ್ದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರಧಾರಿ ಯಾರೆಂದು ತಿಳಿಯುವುದು ಅಚ್ಚರಿಯಾಗುತ್ತದೆ. ಅಷ್ಟರ ಮಟ್ಟಿಗೆ ಈ ನಟಿ ಮೇಕೋವರ್ ಆಗಿದ್ದಾರೆ. ಹೌದು. ಮಾಜಿ ಪ್ರಧಾನಿ ಪಾತ್ರದಲ್ಲಿ ನಟಿಸಿರೋದು ಖ್ಯಾತ ನಟಿ ಲಾರಾ ದತ್ತಾ. ಈ ಬಗ್ಗೆ ಖುದ್ದು ಲಾರಾ ದತ್ತಾ ಅವರು ಹೇಳಿಕೊಂಡ ನಂತರವೇ ಗೊತ್ತಾಗಿದ್ದು.

ಇಂದಿರಾ ಗಾಂಧಿ ಅವರ ಪಾತ್ರಕ್ಕೆ ಬೇಕಾದಂತೆ ಮೇಕಪ್ ಮಾಡಲಾಗಿದ್ದು, ಲಾರಾ ದತ್ತಾ ಅವರ ಮೇಕೋವರ್ ನೋಡಿದ ವೀಕ್ಷಕರು ಹುಬ್ಬೇರಿಸುವುದರ ಜೊತೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಲಾರಾ ದತ್ತಾ ತಮ್ಮ ಮೇಕೋವರ್ ವಿಡಿಯೋವನ್ನು ಈಗ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಅವರನ್ನು ಇಂದಿರಾ ಗಾಂಧಿ ಪಾತ್ರಕ್ಕೆ ಹೇಗೆ ತಯಾರು ಮಾಡಲಾಯಿತು ಎಂದು ತೋರಿಸಲಾಗಿದೆ.

ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್ ಒಂದು ಗೂಢಚಾರದ ರೋಮಾಂಚನಕಾರಿ ಚಿತ್ರವಾಗಿದ್ದು, 1984ರ ಅವಧಿಯ ಕಥೆಯನ್ನು ಹೊಂದಿದೆ. ಆಗಸ್ಟ್ 19ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

Edited By : Nirmala Aralikatti
PublicNext

PublicNext

05/08/2021 05:43 pm

Cinque Terre

265.5 K

Cinque Terre

18