ಬೆಂಗಳೂರು: ಕಳೆದ ಶುಕ್ರವಾರವಷ್ಟೇ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಈ ನಡುವೆ ಚಿತ್ರದ ಒಂದು ಸೀನ್ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಆ ಬಗ್ಗೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್ ಎಸ್ ಸಚ್ಚಿದಾನಂದ ಮೂರ್ತಿ ಅವರು ಚಕಾರವೆತ್ತಿದ್ದರು. ಈ ದೃಶ್ಯದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂದು ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದರು.
ಈ ಆರೋಪ ಕೇಳಿ ಬಂದ ನಂತರ ಪ್ರತಿಕ್ರಿಯೆ ನೀಡಿದ ನಿರ್ದೇಶಕ ನಂದಕಿಶೋರ್ ಈ ಬಗ್ಗೆ ಕ್ಷಮೆ ಯಾಚಿಸಿ ಚಿತ್ರದಲ್ಲಿನ ಆ ದೃಶ್ಯವನ್ನ ಕಟ್ ಮಾಡೋದಾಗಿ ಹೇಳಿದ್ದಾರೆ. ವಿಲನ್ ತಂಡದ ಖಳ ಪಾತ್ರಧಾರಿಯೊಬ್ಬ ಪೂಜಾರಿಯ ಮೇಲೆ ಕಾಲಿಟ್ಟ ದೃಶ್ಯ ಇದಾಗಿತ್ತು.
PublicNext
22/02/2021 09:31 am