ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕನ್ನಡಿಗ ಸಿನಿಮಾ ಹಲವಾರು ವಿಶೇಷತೆಗಳ ಮೂಲಕ ಸುದ್ಧಿಯಾಗುತ್ತಲೇ ಇದೆ. ಈಗ ಕನ್ನಡಿಗ ಸಿನಿಮಾ ತಂಡಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಜೊತೆಯಾಗಿ ಸಿನಿಮಾಗೆ ಸಾಥ್ ನೀಡಿದ್ದಾರೆ.
ರವಿಚಂದ್ರನ್ ಅಭಿನಯದ ಕನ್ನಡಿಗ ಸಿನಿಮಾದ ಹಾಡೊಂದಕ್ಕೆ ಶಿವಣ್ಣ ಧ್ವನಿಯಾಗದ್ದು ಜಟ್ಟ ಸಿನಿಮಾ ಖ್ಯಾತಿಯ ಗಿರಿರಾಜ್ ಡೈರೆಕ್ಷನ್ ಒಳಗೆ ನಿರ್ಮಾಣವಾಗುತ್ತಿರುವ ಕನ್ನಡಿಗ ಚಿತ್ರದ ಹಾಡನ್ನು ಶಿವರಾಜ್ ಕುಮಾರ್ ಹಾಡಿದ್ದಾರೆ.
ಕನ್ನಡ ಭಾಷೆ, ನೆಲ, ಜಲ ಸಂಸ್ಕೃತಿ ಕುರಿತಂತೆ ಬರೆದಿರುವ ಹಾಡನ್ನು ಶಿವರಾಜಕುಮಾರ್ ಹಾಡಿದ್ದು, ಸಿನಿಮಾಗೆ ಈ ಹಾಡು ಜೋಶ್ ತುಂಬಲಿದೆಯಂತೆ. ರವಿಚಂದ್ರನ್ ಸಿನಿಮಾಗೆ ಹಾಡಿದ ಶಿವರಾಜಕುಮಾರ್ ರವಿಚಂದ್ರನ್ ನನ್ನ ನಡುವೆ ಉತ್ತಮ ಸ್ನೇಹವಿದೆ. ಅವರ ಸಿನಿಮಾದಲ್ಲಿ ಹಾಡಿರುವುದು ನನಗೆ ಖುಷಿ ತಂದಿದೆ ಎಂದು ರಣಧೀರನನ್ನು ಹೊಗಳಿದ್ದಾರೆ.
ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ 1858 ರ ಕಾಲಘಟ್ಟವನ್ನು ಮರು ಸೃಷ್ಟಿಸಲಾಗುತ್ತಿದೆ. ಆ ದಿನಗಳಲ್ಲಿ ನಡೆದಂತಹ ನೈಜ ಘಟನೆ ಆಧರಿಸಿ ಸಿನಿಮಾ ಸ್ಕ್ರಿಪ್ಟ್ ಮಾಡಿದೆಯಂತೆ ಸಿನಿಮಾ ತಂಡ.
ಈ ಸಿನಿಮಾದಲ್ಲಿ ಬರಹಗಾರರ ಕುಟುಂಬದಿಂದ ಬಂದ ಕನ್ನಡ ವಿದ್ವಾಂಸನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯ ಮಾಡಲಿದ್ದಾರೆ. ಈ ಸಿನಿಮಾ ನಾಯಕಿಯಾಗಿ ಪಾವಾನಾ ನಟಿಸುತ್ತಿದ್ದು, ಹಿರಿಯ ಕಲಾವಿದರ ಬಳಗವೇ ಸಿನಿಮಾದಲ್ಲಿದ್ದು ವಜ್ರೇಶ್ವರಿ ಕುಮಾರ್ ಈ ಸಿನಿಮಾ ಮಾಡಲು ಬಂಡವಾಳ ಹೂಡಿಕೆ ಮಾಡಿದ್ದಾರೆ.
PublicNext
13/02/2021 12:28 pm