ಪೊಗರು ಸಿನಿಮಾ ಫೆಬ್ರವರಿ 19 ರಥಸಪ್ತಮಿ ದಿನ ರಿಲೀಸ್ ಆಗುತ್ತಿದೆ. ಲಾಕ್ ಡೌನ್ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಬಿಗ್ ಸಿನಿಮಾ ಇದಾಗಿದೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಪ್ರೊಮೋಷನ್ ಚಟುವಟಿಕೆಯಲ್ಲಿ ಸಿನಿಮಾತಂಡ ನಿರತವಾಗಿದೆ. ಆದರೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮಾತ್ರ ಪೊಗರು ಸಿನಿಮಾದ ಬಗ್ಗೆ ಎಲ್ಲೂ ಉಸಿರೆತ್ತುತ್ತಿಲ್ಲ. ಕನ್ನಡ ಸಿನಿಮಾರಂಗದಿಂದ ದೂರ ಸರಿದಿರುವ ರಶ್ಮಿಕಾ, ತನ್ನದೆ ಸಿನಿಮಾದ ಬಗ್ಗೆಯೂ ಮಾತನಾಡದೆ ಇರುವುದು ಕನ್ನಡ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಶ್ಮಿಕಾ ಕೈಯಲ್ಲಿ ಇರುವುದು ಕನ್ನಡದ ಏಕೈಕ ಸಿನಿಮಾ ಪೊಗರು. ಕನ್ನಡ ಸಿನಿಮಾರಂಗದಿಂದ, ಕನ್ನಡ ಸಿನಿಮಾಗಳಿಂದ ರಶ್ಮಿಕಾ ಬಹು ದೂರ ಸರಿದಿದ್ದಾರೆ. ಪೊಗರು ಸಿನಿಮಾ ಬಳಿಕ ರಶ್ಮಿಕಾ ಕನ್ನಡದ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ, ಆದರೆ ಒಪ್ಪಿಕೊಂಡ ಸಿನಿಮಾಗೂ ಸರಿಯಾದ ನ್ಯಾಯ ಸಲ್ಲಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಪೊಗರು ಸಿನಿಮಾಗೆ ಇದು ತುಂಬಾ ಮಹತ್ವದ ಘಟ್ಟ. ರಿಲೀಸ್ ಗೆ ಇದೊಂದೆ ತಿಂಗಳಿರುವುದು. ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರಲು ಹರಸಾಹಸ ಪಡಬೇಕು. ಇಡೀ ಸಿನಿಮಾತಂಡ ಚಿತ್ರದ ರಿಲೀಸ್ ನಲ್ಲಿ ನಿರತವಾಗಿದೆ. ಇಂಥ ಸಮಯದಲ್ಲಿ ಚಿತ್ರದ ನಾಯಕಿ ಪ್ರಮೋಷನ್ ಚಟುವಟಿಕೆಯಿಂದ ದೂರ ಉಳಿಯುವುದು ಚಿತ್ರತಂಡಕ್ಕೆ ದೊಡ್ಡ ಹೊಡೆತ. ರಶ್ಮಿಕಾ ಯಾಕೆ ಕನ್ನಡ ಸಿನಿಮಾದಿಂದ ದೂರ ಉಳಿದಿದ್ದಾರೆ, ತನ್ನದೆ ಸಿನಿಮಾ ಪೊಗರು ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎನ್ನುವುದು ಕನ್ನಡ ಪ್ರೇಕ್ಷಕರ ಪ್ರಶ್ನೆಯಾಗಿದೆ.
PublicNext
19/01/2021 03:58 pm