ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಲಿವುಡ್ ನಿರ್ದೇಶಕನ ಜೊತೆ ಕಾಣಿಸಿಕೊಂಡ 'ರಾಕಿ ಭಾಯ್'; ಹೆಚ್ಚಾಯ್ತು ಫ್ಯಾನ್ಸ್ ಕುತೂಹಲ

'ರಾಕಿಂಗ್ ಸ್ಟಾರ್‌' ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ಯಾಕೆಂದರೆ, 'ಕೆಜಿಎಫ್: ಚಾಪ್ಟರ್ 2' ತೆರೆಕಂಡು ಆರು ತಿಂಗಳಾದರೂ, ಅವರು ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಗುಟ್ಟನ್ನು ಮಾತ್ರ ರಟ್ಟು ಮಾಡಿಲ್ಲ. ಆದರೆ ಅವರ ಮುಂದಿನ ಸಿನಿಮಾದ ಬಗ್ಗೆ ಒಂದಲ್ಲ ಒಂದು ವದಂತಿಗಳು ಮಾತ್ರ ಹರಡುತ್ತಲೇ ಇವೆ. ಈ ಮಧ್ಯೆ ಅವರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಪ್ರವಾಸದಲ್ಲೂ ಬ್ಯುಸಿ ಆಗಿದ್ದಾರೆ.

ಅಚ್ಚರಿ ಅಂದರೆ, ಅವರೀಗ ಹಾಲಿವುಡ್‌ ನಿರ್ದೇಶಕ ಜೆಜೆ ಪೆರ್ರಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹಾಗಾದರೆ, ಯಶ್ ನೆಕ್ಸ್ಟ್‌ ಹಾಲಿವುಡ್ ಸಿನಿಮಾ ಮಾಡ್ತಾರಾ? ಸದ್ಯ ಅಮೆರಿಕದಲ್ಲಿರುವ ನಟ ಯಶ್ ಅಲ್ಲಿನ Taran Tactical Innovations ಗೆ ಭೇಟಿ ನೀಡಿದ್ದಾರೆ. ಅಲ್ಲಿ ಗನ್ ಹಿಡಿದು ಶೂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಯಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಹಾಲಿವುಡ್‌ ಮಾದರಿಯ ಸಿನಿಮಾಗೆ ತಯಾರಿಯೇ ಎಂಬರ್ಥದಲ್ಲಿ ಕಣ್ಣರಳಿಸಿದ್ದಾರೆ.

ವಿಡಿಯೋ ಜೊತೆಗೆ, 'ಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ, ಅದನ್ನು ಗುರುತಿಸುವುದೇ ಸವಾಲು...' ಎಂದು ಬರೆದುಕೊಂಡಿರುವ ಯಶ್, ನನ್ನ ಜೆಜೆ ಪೆರ್ರಿ ಅವರೇ ನಿಮಗೆ ಥ್ಯಾಂಕ್ಯೂ ಎಂದಿದ್ದಾರೆ. ಈ ದಿನ ಸುಂದರವಾಗಿದೆ ಎಂದಿರುವ ಯಶ್, ಮುಂದಿನ ಬಾರಿ Kalashnikov ಟ್ರೈ ಮಾಡೋಣ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

Edited By : Abhishek Kamoji
PublicNext

PublicNext

29/09/2022 05:59 pm

Cinque Terre

61.39 K

Cinque Terre

2