ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯನದ ಮೂಲಕ ಹೃದಯ ತಟ್ಟಿದ ಕೆಕೆಗೆ ಗಾನ ನಮನ!

ಮುಂಬೈ: ಬಾಲಿವುಡ್ ಗಾಯಕ ಕೆಕೆ ಈಗಿಲ್ಲ. ಆದರೆ, ಅವರ ಹಾಡುಗಳು ಸಂಗೀತ ಪ್ರೇಮಿಗಳ ಹೃದಯದಲ್ಲಿಯೆ ಇವೆ. ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಆ "ತಡಪ್ ತಡಪ್" ಹಾಡು ಭಗ್ನ ಪ್ರೇಮಿಗಳ ಹೃದಯದಲ್ಲಿ ಈಗಲೂ ಇದೆ. ಗಾಯನದ ಮೂಲಕವೇ ಹೃದಯ ತಟ್ಟಿದ ಗಾಯಕನ ಹೃದಯವೇ ಸ್ತದ್ಭಗೊಂಡು ಗಾನ ಪ್ರಿಯರ ಹೃದಯಕ್ಕೆ ಶಾಶ್ವತ ನೋಟು ಕೊಟ್ಟು ಬಿಟ್ಟಿದೆ.

ಗಾಯಕ ಕೃಷ್ಣ ಕುಮಾರ್ ಕುನ್ನತ್ ಅಂತ ಹೇಳಿದ್ರೆ ನಿಜಕ್ಕೂ ಯಾರಿಗೂ ಗೊತ್ತೇ ಆಗೋದಿಲ್ಲ. ಕೆಕೆ ಅಂತ ಹೇಳಿದ್ರೆ ಸಾಕು. ಎಲ್ಲರ ಕಣ್ಮುಂದೆ ವಿಶೇಷ ಕಂಠಸಿರಿಯ ಗಾಯಕ ಕೆಕೆ ಚಹರೆ ಬಂದು ಹೋಗುತ್ತದೆ. ಇಂತಹ ಗಾಯಕ ಬಹು ಭಾಷೆಯ ಗಾಯಕನೇ ಆಗಿದ್ದಾರೆ. ಇವರ ಗಾಯನದಲ್ಲಿ ಒಂದು ವಿಶೇಷ ಸೆಳೆತ ಇದ್ದೇ ಇತ್ತು. ಅಷ್ಟು ವಿಶೇಷ ಗಾಯಕ ಈಗೀಲ್ಲ. ಆದರೆ, ಹಾಡುಗಳಲ್ಲಿ ಕೆಕೆ ಸದಾ ಜೀವಂತ.

ಹೌದು.ಕೆಕೆ ಹಿಂದಿ,ತೆಲುಗು,ತಮಿಳು,ಮರಾಠಿ ಹೀಗೆ ಎಲ್ಲ ಭಾಷೆಗಳಲ್ಲೂ ಹಾಡಿದ್ದಾರೆ. ಅವುಗಳಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ "ತಡಪ್ ತಡಪ್" ಹಾಡು ಎಲ್ಲರ ಹೃದಯ ತಟ್ಟಿತ್ತು. ಹಿನ್ನೆಲೆ ಗಾಯನದೊಂದಿಗೆ ಆಲ್ಬಂ ಸಾಂಗ್ ಅನ್ನೂ ಹಾಡಿರೋ ಗಾಯಕ ಕೆಕೆ ಕನ್ನಡದ ಗೀತೆಗಳನ್ನೂ ಹಾಡಿದ್ದಾರೆ.

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆರ್ಯನ್ ,ನಟ ಆದಿತ್ಯ ಅಭಿನಯದ ಲವ್, ಪರಿಚಯ, ಮದನ,ಮನಸಾರೆ, ಮಳೆ ಬರಲಿ ಮಂಜು ಇರಲಿ ಚಿತ್ರದಲ್ಲೂ ತಮ್ಮ ವಿಶೇಷ ಕಂಠಸಿರಿಯ ಛಾಪು ಮೂಡಿಸಿ ಹೋಗಿದ್ದಾರೆ. ಈ ಗಾಯಕನಿಗೆ ನಮ್ಮದೊಂದು ಗಾನ ನಮನ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್‌ ಬ್ಯೂರೋ,ಪಬ್ಲಿಕ್ ನೆಕ್ಸ್ಟ್.

Edited By : Nagesh Gaonkar
PublicNext

PublicNext

01/06/2022 08:52 pm

Cinque Terre

147.39 K

Cinque Terre

5