ಚೆನ್ನೈ: ಸ್ವರ್ಣ ಕಂಠದಿಂದಿಲ್ಲೇ ಜನಮನ ಗೆದ್ದಿನ ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರ ಇಂದು ಚೆನ್ನೈನ ರೆಡ್ ಹಿಲ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.
ಎಸ್ ಪಿ.ಬಿ.ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಫಾರ್ಮ್ ಹೌಸ್ ನಲ್ಲಿ ಇಡಲಾಗಿದೆ.
ಅಂತ್ಯಸಂಸ್ಕಾರ ನಡೆಯುವ ಫಾರ್ಮ್ ಹೌಸ್ ಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಸದ್ಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್ ಪಿಬಿ ಅವರು ಕಳೆದ 51 ದಿನಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಂಕಿನ ವಿರುದ್ಧ ಸಾವು ಬದುಕಿನ ಹೋರಾಟ ನಡೆಸಿದ್ದ ಅವರಿಗೆ ಚಿಕಿತ್ಸೆ ಬಳಿಕ ಕೊರೊನಾ ನೆಗೆಟಿವ್ ದೃಢವಾಗಿತ್ತು.
ಆದರೆ ಶುಕ್ರವಾರ ಮಧ್ಯಾಹ್ನ 1.04ರ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.
ಎಸ್ಪಿಬಿ ನಿಧನದ ಹಿನ್ನೆಯಲ್ಲಿ ರಾಜ್ಯದಲ್ಲಿ ಶುಕ್ರವಾರ ಶೋಕಾಚರಣೆ ಆಚರಿಸಲಾಯಿತು.
ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿತ್ತು. ವಿಧಾನಸಭಾ ಕಲಾಪದಲ್ಲೂ ದಿಗ್ಗಜ ಗಾಯಕನ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
PublicNext
26/09/2020 12:08 pm