ಬೆಂಗಳೂರು: ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು ಸ್ಯಾಂಡಲ್‍ವುಡ್ ಮೇರು ನಟ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಒಂದು ವಾರ ಕಳೆದಿದೆ. ಈ ನಡುವೆ ಕರುನಾಡ ಕುವರ ಅಪ್ಪು ಸ್ವರ್ಗದಲ್ಲಿ ಹೆತ್ತವರೊಂದಿಗೆ ಕಾಲ ಕಳೆಯುತ್ತಿರುವ ವರ್ಣಚಿತ್ರಗಳ ಫೋಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ಭಾವುಕರಾಗಿ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಸ್ವರ್ಗದಲ್ಲಿ ಪುನೀತ್ ಅವರು ತಂದೆ ರಾಜ್‌ಕುಮಾರ್ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ವರ್ಣಚಿತ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಲಾವಿದ ಕರಣ್ ಆಚಾರ್ಯ ಅವರು, ಸ್ವರ್ಗದಲ್ಲಿ ಪುನೀತ್, ಅಪ್ಪಾಜಿ ಅವರ ಕಣ್ಣನ್ನು ಹಿಂದಿನಿಂದ ಮುಚ್ಚಿ, ನಾನು ಯಾರು ಎಂದು ಕೇಳುತ್ತಿರುವಂತೆ ಕಲ್ಪಿಸಿಕೊಂಡು ಚಿತ್ರಬಿಡಿಸಿದ್ದಾರೆ. ಈ ಎಲ್ಲ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಮತ್ತೆ ಕಣ್ಣೀರಾಗಿದ್ದಾರೆ.
PublicNext
05/11/2021 01:50 pm