ಬಹು ನಿರೀಕ್ಷಿತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಮುಂದಿನ ವರ್ಷ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಈ ಸಿನಿಮಾದ ಮೊದಲ ಹಾಡು ಪವರ್ ಸ್ಟಾರ್ ಭಾರೀ ಸದ್ದು ಮಾಡಿದೆ. ಅಷ್ಟೇ ಅಲ್ಲದೆ ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ.
ಚಿತ್ರತಂಡವು ಪ್ರೇಕ್ಷಕರ ಗಮನ ಸೆಳೆಯಲು 'ಪವರ್ ಆಫ್ ಯೂತ್' ಎಂಬ ಚಾಲೆಂಜ್ ಆರಂಭಿಸಿದೆ. ಅಭಿಮಾನಿಗಳು ಡ್ಯಾನ್ಸ್ ವಿಡಿಯೋ ಮಾಡಿ ಕಳುಹಿಸಿ ಎಂದು ಕರೆ ನೀಡಿದೆ.ಇತ್ತ ಚಿತ್ರದ ನಾಯಕಿ ಸಯೇಶಾ ಪವರ್ ಆಫ್ ಯೂತ್ ಹಾಡಿಗೆ ಸ್ಟೆಪ್ ಹಾಕಿ, ಹುಡುಗಿಯರಿಗೆ ಅದರಲ್ಲೂ ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ್ದಾರೆ.
ತಮ್ಮ ಡ್ಯಾನ್ಸ್ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ ಸಯೇಶಾ, ಕರ್ನಾಟಕದ ಹುಡುಗಿಯರಿಗೆ ಮತ್ತು ಎಲ್ಲರಿಗೂ ನಿಮ್ಮ ಡ್ಯಾನ್ಸ ಪವರ್ ಅನ್ನು ತೋರಿಸಿ. ವಿಡಿಯೋ ಮಾಡಿ ಕಳುಹಿಸಿ' ಎಂದು ಬರೆದುಕೊಂಡಿದ್ದಾರೆ.
PublicNext
15/12/2020 05:06 pm