ತೆಲುಗು ನಟನೊಬ್ಬ ಕನ್ನಡ ಖ್ಯಾತ ನಟ ವಿಷ್ಣುವರ್ಧನ್ ವ್ಯಕ್ತಿತ್ವದ ಬಗ್ಗೆ ತುಚ್ಛವಾಗಿ ಮಾತನಾಡಿರುವುದು ಕನ್ನಡಿಗರನ್ನು ಕೆಣಕಿದೆ.
ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ರಂಗರಾಜು ಎಂಬಾತ, ಸಂದರ್ಶನವೊಂದರಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಈ ವಿಡಿಯೋ ವಿರುದ್ಧ ಹಲವಾರು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹಿರಿಯ ನಟ ಜಗ್ಗೇಶ್ ಸಹ ವಿಷ್ಣುವರ್ಧನ್ ಬಗ್ಗೆ ಮಾತನಾಡಿರುವ ಆ ನಟನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ವಿಷ್ಣುವರ್ಧನ್ ಕುರಿತು ನಾಲಿಗೆ ಹರಿಬಿಟ್ಟ ನಟ ವಿಜಯ್ ರಂಗರಾಜು ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್, 'ಇವನ್ಯಾರೊ ಕಲಾವಿದನಂತೆ, ಈ ದರಿದ್ರ ಮುಖ ಯಾವ ಚಿತ್ರದಲ್ಲು ನೋಡಿದ ನೆನಪಿಲ್ಲಾ. ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ' ಎಂದು ಕರೆ ನೀಡಿದ್ದಾರೆ ಜಗ್ಗೇಶ್.
PublicNext
10/12/2020 08:57 pm