ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುತಾತ್ಮರನ್ನು ನೆನೆದ ನಿಖಿಲ್ ಕುಮಾರಸ್ವಾಮಿ

ಮುಂಬೈನ ಕರಾಳ ದಾಳಿ 12 ವರ್ಷವಾದ ಸಂದರ್ಭದಲ್ಲಿ ನಾಡಿನ ಹಲವರು ಅಂದು ಅಗಲಿದ ಜೀವಗಳಿಗೆ, ಪೊಲೀಸರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಕನ್ನಡದ ಯುವ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಹ 26/11 ದಾಳಿ ಹುತಾತ್ಮರಿಗೆ ಸಾಮಾಜಿಕ ಜಾಲತಾಣದಲ್ಲಿ ಗೌರವ ನಮನ ಸಲ್ಲಿಸಿದ್ದಾರೆ.

'26/11 ರ ಮುಂಬೈ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೆ ಹೋರಾಡಿ ಹುತಾತ್ಮರಾದ ಎಲ್ಲಾ ಕೆಚ್ಚೆದೆಯ ವೀರ ಯೋಧರಿಗೆ ನನ್ನ ಗೌರವ ನಮನಗಳು.' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.

ರಾಷ್ಟ್ರವನ್ನೇ ಭೀತಿಗೊಳಿಸಿದ್ದ ಮುಂಬೈ ದಾಳಿ ನಡೆದು ಇಂದಿಗೆ 12 ವರ್ಷ. 2008 ರ ನವೆಂಬರ್ 26 ರಂದು ಮುಂಬೈನ ತಾಜ್ ಹೋಟೆಲ್, ನಾರಿಮನ್ ಪಾಯಿಂಟ್, ಶಿವಾಜಿ ಟರ್ಮಿನಲ್ ಇನ್ನೂ ಹಲವು ಕಡೆ ಉಗ್ರರು ದಾಳಿ ಮಾಡಿ ಹಲವರನ್ನು ಕೊಂದಿದ್ದರು.

ಸಮುದ್ರ ಮಾರ್ಗದಿಂದ ಮುಂಬೈಗೆ ಬಂದಿದ್ದ 10 ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಟ 174 ಮಂದಿ ಅಸುನೀಗಿ, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Edited By : Nagaraj Tulugeri
PublicNext

PublicNext

26/11/2020 03:12 pm

Cinque Terre

99.85 K

Cinque Terre

1