ಮೊದಲ ಬಾರಿಗೆ ನಟ ಅಕ್ಷಯ್ ಅವರ ಸಿನಿಮಾವೊಂದು ಚಿತ್ರಮಂದಿರದ ಬದಲು, ನೇರವಾಗಿ ಓಟಿಟಿಯಲ್ಲಿ ತೆರೆಕಂಡ ಚಿತ್ರ “ಲಕ್ಷ್ಮೀ”
ಈ ಚಿತ್ರವು ಸೋಮವಾರ (ನ.9) ಸಂಜೆ ಓಟಿಟಿಯಲ್ಲಿ ಪ್ರಸಾರ ಆರಂಭಿಸಿದೆ! ಅಲ್ಲದೆ, ಇದು ತಮಿಳಿನ ಸೂಪರ್ ಹಿಟ್ ಚಿತ್ರ 'ಕಾಂಚನ' ರಿಮೇಕ್ ಅಗಿದ್ದರಿಂದ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.
ಆದರೆ, ಅದೆಲ್ಲವೂ ತಲೆಕೆಳಗಾಗಿದ್ದು, ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಕೆಂಡಕಾರುತ್ತಿದ್ದಾರೆ!
ಈ ಸಿನಿಮಾದಲ್ಲಿ ಅಕ್ಷಯ್ ಗೆ ನಾಯಕಿಯಾಗಿ ಕಿಯರಾ ಅಡ್ವಾಣಿ ಇದ್ದಾರೆ.
ಶರದ್ ಕೇಲ್ಕರ್ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರದ ಕಥೆ ಹಾಗೂ ಕೆಲವೊಂದು ಮಹತ್ವದ ದೃಶ್ಯಗಳನ್ನಷ್ಟೇ ತೆಗೆದುಕೊಂಡು, ಹಿಂದಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ನಿರ್ದೇಶಕ ರಾಘವ ಲಾರೆನ್ಸ್! ಆದರೆ, 'ಕಾಂಚನ' ಕೊಟ್ಟಷ್ಟು ಮನರಂಜನೆಯನ್ನು ಈ 'ಲಕ್ಷ್ಮೀ' ನೀಡುವುದಿಲ್ಲ! ಹಾರರ್ ದೃಶ್ಯಗಳು ಭಯ ಹುಟ್ಟಿಸುವುದರ ಬದಲು, ನಗು ತರಿಸುತ್ತವೆ, ಕಾಮಿಡಿ ಸೀನ್ ಗಳು ಬೇಸರ ಮೂಡಿಸುತ್ತವೆ.
ಒಟ್ಟಾರೆ ವೀಕ್ಷಕರನ್ನು ರಂಜಿಸುವಲ್ಲಿ 'ಲಕ್ಷ್ಮೀ' ಸಂಪೂರ್ಣ ಸೋತಿದೆ.
ಮೂಲ ಚಿತ್ರದಲ್ಲಿ ನಾಯಕನ ಹೆಸರು ರಾಘವ ಎಂದಿದ್ದರೆ, ಇಲ್ಲಿ ಮಾತ್ರ 'ಆಸೀಫ್' ಎಂದು ಬದಲಿಸಲಾಗಿದೆ. ನಾಯಕಿ ಹೆಸರು ರಶ್ಮೀ ಎಂದು ಇಡಲಾಗಿದೆ.
ಇದು ಪರೋಕ್ಷವಾಗಿ ಲವ್ ಜಿಹಾದ್ ಗೆ ಬೆಂಬಲ ನೀಡುವಂತಿದೆ! ಕ್ಲೈಮ್ಯಾಕ್ಸ್ ನಲ್ಲಿ ಖಳನಾಯಕ ಶೂ ಧರಿಸಿ, ದೇವಸ್ಥಾನದ ಒಳಗೆ ಹೋಗುತ್ತಾನೆ! ಈ ಸಿನಿಮಾವು ಹಿಂದೂ ವಿರೋಧಿಯಾಗಿದೆ ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ.
PublicNext
10/11/2020 04:54 pm