ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಗುರು'ವಿನ ಜೊತೆ ಮತ್ತೆ ಒಂದಾದ ಡಾಲಿ ಧನಂಜಯ್ !

'ಡಾಲಿ' ಧನಂಜಯ್ಯ ತನ್ನ ಕ್ಲಾಸ್ ಅಂಡ್ ಮಾಸ್ ಡೈಲಾಗ ಖದರ್ ಆಕ್ಟಿಂಗ್ ಮೂಲಕವೇ ಚಂದನವನದಲ್ಲಿ ನಾಯಕನಿಂದ ಖಳನಾಯಕನ ಪಾತ್ರಕ್ಕೂ ಸೈ ಎನಿಸಿಕೊಂಡ ನಟ.

ಈ ನಟ ಕನ್ನಡ ಚಿತ್ರರಂಗಕ್ಕೆ ಪರಿಚಯವಾದದ್ದೇ 'ಹಿಟ್' ಡೈರೆಕ್ಟರ್ ಗುರುಪ್ರಸಾದ್ ಅವರ 'ಡೈರಕ್ಟರ್ ಸ್ಪೇಶಲ್' ಸಿನಿಮಾ ಮೂಲಕವೇ ತದನಂತರದಲ್ಲಿ ಆದ ಬೆಳವಣಿಗೆ ನಿಮ್ಗೂ ಗೊತ್ತೇ ಇದೆ ಎರಡನೇ ಸಲ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಈ ಧನಂಜಯ್ ಡೈರೆಕ್ಟರ್ ಗುರುಪ್ರಸಾದ್ ನಡುವೆ ಸಣ್ಣದೊಂದು ಶೀತಲ ಸಮರ ಮತ್ತೇ ಒಂದೇ ಪರದೆ ಮೇಲೆ ಇಬ್ಬರು ಕಾಣದಂತೆ ಮಾಡಿತು.

ಸದ್ಯ ಸಿನಿ ಪ್ರೀಯರಿಗೆ ಮತ್ತೋಂದು ಖುಷೀ ವಿಚಾರ ಲಭ್ಯವಾಗಿದ್ದು ಈ ಇಬ್ಬರೂ ಮತ್ತೆ ಒಂದಾಗಿದ್ದಾರೆ, ಧನಂಜಯ್ ನಟಿಸಿ ನಿರ್ಮಾಣ ಮಾಡುತ್ತಿರುವ 'ಬಡವ್ ರಾಸ್ಕಲ್ ಚಿತ್ರದ ಚಿತ್ರೀಕರಣ ಇತ್ತಿಚೆಗಷ್ಟೇ ಮುಕ್ತಾಯ ಕಂಡಿದ್ದು ಈ ಚಿತ್ರದಲ್ಲಿ ಗುರುಪ್ರಸಾದ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಮತ್ತೇ ಹಳೆ ಸಂಬಂಧದ ಚಿಗುರಿಗೆ ನೀರೆರೆದಿದ್ದು ನಾವಿಬ್ಬರೂ ಒಂದಾಗಿದ್ದೆವೆಂದು ಹಲವು ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಈಗಾಗಲೇ ಧನಂಜಯ್ ನಟಿಸಿರುವ ಪೊಗರು, ಯುವರತ್ನ, ರತ್ನನ ಪ್ರಪಂಚ, ಹೆಡ್ ಬುಷ್, ಸಲಗ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು ಪ್ರೇಕ್ಷಕರಲ್ಲಿ ಟೀಸರ್, ಪೋಸ್ಟರ್ ಮೂಲಕವೇ ಸಖತ್ ಕ್ರೇಜ್ ಹುಟ್ಟುಹಾಕಿವೆ.

Edited By :
PublicNext

PublicNext

15/10/2020 01:56 pm

Cinque Terre

43.15 K

Cinque Terre

2