ಚೆನ್ನೈ: ತಮಿಳು ಸ್ಟಾರ್ ನಟ ಧನುಷ್ ಹಾಗೂ ಹಿರಿಯ ನಟ, ರಾಜಕಾರಣಿ ವಿಜಯಕಾಂತ್ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಕೂಡಲೇ ಇಬ್ಬರ ಮನೆಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, 'ಚೆನ್ನೈನ ಧನುಷ್ ಅವರ ಅಭಿರಾಮಪುರಂ ನಿವಾಸ ಹಾಗೂ ವಿಜಯಕಾಂತ್ ಅವರ ವಿರುಗಂಬಕ್ಕಂನ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಎರಡು ಬಾರಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿತ್ತು. ಕೂಡಲೇ ಇಬ್ಬರ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಿದಾಗ ಏನೂ ಸಿಕ್ಕಿಲ್ಲ. ಹೀಗಾಗಿ ಇದೊಂದು ಸುಳ್ಳು ಬೆದರಿಕೆ' ಎಂದು ತಿಳಿಸಿದ್ದಾರೆ.
PublicNext
14/10/2020 11:33 am